Friday 22 November 2019

Turuvekere Mule Shankara temple Bhumija Style hoysala

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ಕರ್ನಾಟಕದ ವಾಸ್ತುಶಿಲ್ಪದ ಪರಂಪರೆಯಲ್ಲಿ ಹಲವು ಮಾದರಿಯ ಶಿಖರ ಹೊಂದಿರುವ ದೇವಾಲಯಗಳಿವೆ.  ಈ ಭಗೆಯಲ್ಲಿ ಭೂಮಿಜ ಶೈಲಿಯ ಶಿಕರಗಳು ಸಹ ಒಂದು ಬಗೆ. ಪಿರಮಿಡ್ಡಿನಂತೆ ಮೇಲೆ ಏರುತ್ತಾ ಸ್ಠೂಪದಲ್ಲಿ ಕೊನೆಗೊಳ್ಳುವ ಈ ಮಾದರಿಯಲ್ಲಿ ಹೊಯ್ಸಳರು ನಿರ್ಮಿಸಿದ ಎರಡು ದೇವಾಲಯಗಳು ಲಭ್ಯವಿದೆ.  ಅವುಗಳಲ್ಲಿ ತುರುವೆಕೆರೆಯ ಮೂಲೆ ಶಂಕರ ದೇವಾಲಯ ಒಂದಾದರೆ ಮತ್ತೊಂದು ನುಗ್ಗೆಹಳ್ಳಿಯ ಸದಾಶಿವ ದೇವಾಲಯ.

ತುಮಕೂರು ಜಿಲ್ಲೆಯ ತುರುವೆಕೆರೆಯಲ್ಲಿ ಕೆರೆಯ ಸಮೀಪವಿರುವ ಜಗತಿಯ ಮೇಲೆ ಇರುವ ಈ ಶಂಕರೇಶ್ವರ ದೇವಾಲಯ ಮೂಲೆ ಶಂಕರ ದೇವಾಲಯವೆಂದೇ ಪ್ರಸಿದ್ದಿ.  ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಮತ್ತು ಮುಖಮಂಟಪ ಹೊಂದಿದ್ದು ಗರ್ಭಗುಡಿಯಲ್ಲಿ ಸುಂದರ ೪ ಅಡಿ ಎತ್ತರದ ಶಿವಲಿಂಗವಿದೆ.  ನವರಂಗದಲ್ಲಿ ಹೊಯ್ಸಳ ಶೈಲಿಯ ಕಂಭಗಳಿದ್ದು ಉಳಿದ ೧೨ ಕಂಭಗಳು ಬಿತ್ತಿಗೆ ಹೊಂದಿಕೊಂಡಿವೆ.  ಇವುಗಳ ಮದ್ಯದಲ್ಲಿ ಶಿಕರದಂತೆ ಅಲಂಕಾರಗೊಂಡ ಚೌಕಾಕಾರದ ಸಣ್ಣ ಸ್ಥಂಭಗಳಿವೆ. ದೇವಾಲಯದ ಮೂರು ಬದಿಯಲ್ಲಿ ಈ ರೀತಿಯ ಅಲಂಕಾರವಿದ್ದು ಪೂರ್ವ ಭಾಗದಲ್ಲಿನ ಸಣ್ಣ ಜಾಲಂದ್ರದಲ್ಲಿ ಸೂರ್ಯನ ಕಿರಣ ಬೀಳುವಂತೆ ಇರುವ ರಚನೆ ವಿಷೇಶ.

ದೇವಾಲಯದಲ್ಲಿ ಸುಂದರ ಗಣೇಶ, ಸಪ್ತಾಮಾತೃಕೆಗಳು, ಬೈರವ ಮೂರ್ತಿಗಳಿದ್ದು ಸುಂದರ ನಂದಿಇದೆ. ನವರಂಗದ ಭುವನೇಶ್ವರಿಯಲ್ಲಿನ ಕಮಲದ ಕೆತ್ತೆನೆ ಸುಂದರಾವಾಗಿದೆ. ನವರಂಗದ ದ್ವಾರ ಪಂಚ ಶಾಖೆಯಿಂದ ಕೂಡಿದ್ದು ದ್ವಾರಪಾಲಕರು ಕಾಣ ಬರುವುದಿಲ್ಲ.

ಈ ದೇವಾಲಯದ ಮುಖ್ಯ ವಿಷೇಶವೇ ಇಲ್ಲಿನ ಸುಂದರ ಭೂಮಿಜ ಶೈಲಿಯ ಶಿಖರ. ಪಿರಮಿಡ್ ಆಕಾರಾದಲ್ಲಿರುವ ಈ ಶಿಖರ ನಾಲ್ಕು ಹಂತದಲ್ಲಿದ್ದು ಕೆಳಗಿನಿಂದ ಮೇಲಕ್ಕೆ ಕಿರಿದಾಗಿ ಸ್ಠೂಪದಲ್ಲಿ ಕೊನೆಗೊಂಡಿದೆ.  ಪ್ರತಿಹಂತದಲ್ಲಿ ಸ್ಥಂಭ ಕೂಟದ ರಚನೆ ಇದ್ದು ಮೂರು ದಿಕ್ಕಿನಲ್ಲಿ ತ್ರಿಕೋನಾಕಾರದ ನೀಳವಾದ ಪಟ್ಟಿಕೆ ಇದೆ.  ಉತ್ತರ ಭಾರತದ ಅಮಲಕ ಮಾದರಿಯನ್ನು ಹೋಲುವು ಈ ಶಿಖರಗಳು ಹೊಯ್ಸಳರ ದೇವಾಲಯಗಳಲ್ಲಿನ ಶಿಖರದಂತೆ ಸುಖನಾಸಿಯಲ್ಲಿ ಮುಂಚಾಚಿದೆ.

ಇಲ್ಲಿನ ಮತ್ತೊಂದು  ವಿಷೇಶ ದೀಪಸ್ಥಂಭ.  ದಕ್ಷಿಣದ ಪ್ರವೇಶ ದ್ವಾರದ ಎದುರು ಇರುವ ಬದಲು  ದೇವಾಲಯದ ಎಡಗಡೆ ಪೂರ್ವಭಾಗದಲ್ಲಿ ಇದೆ.  ಇಲ್ಲಿ ದಿಕ್ಕಿನ ಅನುಸಾರವಾಗಿ ಸ್ಥಾಪಿತವಾಗಿರಬಹುದು ಅಥವಾ ಕಾಲಂತರದಲ್ಲಿ ಇಲ್ಲಿ ಇರಭಹುದಾದ ಪ್ರವೇಶ ದ್ವಾರ ಮುಚ್ಚಿರಬಹುದು. ಬಲೀಪೀಠ ಸಹ ಕಾಣಬರುವದಿಲ್ಲ.

ಈ ದೇವಾಲಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಟ್ರಸ್ಟ್ ವತಿಯಿಂದ ನವೀಕರಣಗೊಂಡಿದೆ.

ತಲುಪವ ಬಗ್ಗೆ : ತುಮಕೂರು ಜಿಲ್ಲಯ ತಾಲ್ಲೂಕೆ ಕೇಂದ್ರವಾಗಿರುವ ಇಲ್ಲಿಗೆ ಬೆಂಗಳೂರು ಶಿವಮೊಗ್ಗ ಹೆದ್ದಾರಿಯಲ್ಲಿ ಕೆ ಬಿ ಕ್ರಾಸ ಮೂಲಕವಾಗಿ ಅಥವಾ ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಕುಣಿಗಲ್ ಮೂಲಾಕವಾಗಿಯೂ ತಲಪಬಹುದು.
ನೋಡವ ಸ್ಥಳಗಳು : ಇಲ್ಲಿನ ಹೊಯ್ಸಳ ಶೈಲಿಯಲ್ಲಿನ ಇನ್ನೊಂದು ಚನ್ನಕೇಶವ ದೇವಾಲಯ ಮತ್ತು ವಿಜಯನಗರ ಕಾಲದ ಬೇಟೆರಾಯಸ್ವಾಮಿ, ಗಂಗಾಧರೇಶ್ವರ ದೇವಾಲಯ, ಇಲ್ಲಿನ ಸುಂದರ ಅದ್ಭುತ ನಂದಿ ಹಾಗು ಅಪುರೂಪದ ಸ್ಥಾನಿಕ ನರಸಿಂಹ ದೇವಾಲಯ ನೋಡಬಹುದು.

ಶ್ರೀನಿವಾಸ ಮೂರ್ತಿ ಎನ್. ಎಸ್.
೨೪/೨೨೭, ಮೊದಲನೇ ಮಹಡಿ, ಶ್ರೀನಿವಾಸ ನಿಲಯ,
೯ನೇ ಕ್ರಾಸ್, ಎನ್ ಆರ್ ಕಾಲೋನಿ,
ಬೆಂಗಳೂರು – ೫೬೦ ೦೧೯
Mobile - 9449553435


No comments:

Pavagada Shaneeswara Temple