Friday, 22 November 2019

Hosanagara Uma Maheshwara Temple

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ಶಿವಮೊಗ್ಗ ಎಂದೊಡನೆ ನೆನಪಾಗುವುದು ಸುಂದರವಾದ ಹಸಿರು ಹೊದ್ದಿರುವ ಕಾನನಗಳು, ಬೆಟ್ಟಗಳು, ಜಲಪಾತಗಳು.  ಈ ಜಿಲ್ಲೆಯ ಹೊಸನಗರ ತಾಲ್ಲೂಕು ಮಲೆನಾಡಿನ ಈ ಸುಂದರ ಚಿತ್ರಣಕ್ಕೆ ತೆರೆದುಕೊಂಡ ಮಹಾಕಾವ್ಯ ಇದ್ದಂತೆ. ಬಹುತೇಕ ತಾಲ್ಲೂಕು ಅರಣ್ಯದಿಂದ ಕೂಡಿದ್ದು ಕೊಡಚಾದ್ರಿ ಶ್ರೇಣಿಯಲ್ಲಿ ಸುಂದರವಾದ ಪರಿಸರ ಹೊಂದಿದೆ.  ಈ ಹಿನ್ನೆಯಲ್ಲಿ ಶಿಲಾ ವೈಭವದ ಮೆರುಗಿನ  ನೋಡ ಹೊರಟಾಗ ಸಿಗುವ ದೇವಾಲಯವೇ ಹೊಸನಗರದಿಂದ ಸುಮಾರು ೩ ಕಿ ಮೀ ದೂರದಲ್ಲಿ ಸಹ್ಯಾದ್ರಿಯ ಮಡಿಲಲ್ಲಿ ಅಧ್ಯಾತ್ಮದ ಪ್ರಶಾಂತ ವಾತಾವರಣದಲ್ಲಿ ಶಿಲ್ಪ ಲೋಕದ ಹೊಸ ಜಗತ್ತನ್ನೇ ತೋರಿಸುವ ಉಮಾ ಮಹೇಶ್ವರ ದೇವಾಲಯ. 

ಈ ದೇವಾಲಯ ವಿಜಯನಗರ ಕೆಳದಿ ವಾಸ್ತುಶಿಲ್ಪದಲ್ಲಿ ನಿರ್ಮಾಣವಾಗಿದ್ದು  ಸುಮಾರು  ಮೂರು ಆಡಿ ಎತ್ತರದ ಜಗತಿಯ ಮೇಲೆ ೧೮ ಆಡಿ ಉದ್ದದಷ್ಟು ವಿಸ್ತಾರವಾಗಿದೆ. ದೇವಾಲಯ ಗರ್ಭಗುಡಿ, ಅಂತರಾಳ ಹಾಗು ಮುಖಮಂಟಪ ಹೊಂದಿದೆ.  ಗರ್ಬಗುಡಿಯಲ್ಲಿ ಸುಂದರವಾದದ ಶಿವಲಿಂಗವಿದ್ದು  ದ್ವಾರದಲ್ಲಿ ಸುಂದರ ಕೆತ್ತೆನೆಯ ಗಣಪತಿಯ ಕೆತ್ತೆನೆ ಭಲಭಾಗದಲ್ಲಿ ಇದ್ದರೆ ಎಡಭಾಗದಲ್ಲಿ ಪಾರ್ವತಿಯ ಕೆತ್ತೆನೆ ಇದೆ. ವಿತಾನದಲ್ಲಿ ಕಮಲದ ಕೆತ್ತೆನೆ ಇದೆ. ಪ್ರವೇಶ ದ್ವಾರದಲ್ಲಿ ಸುಮಾರು ೩ ೧/೨ ಅಡೀ ಎತ್ತರದ ಸುಂದರ ಶೈವ ದ್ವಾರಪಾಲಕರ ಕೆತ್ತೆನೆ ಇದೆ.

ಇಡೀ ದೇವಾಲಯದ ಸುಂದರತೆ ಅಡಗಿರುವುದೇ ಮುಖಮಂಟಪ ಹಾಗು ಹೊರಭಿತ್ತಿಯಲ್ಲಿನ ಕೆತ್ತೆನೆಗಳು.   ಪ್ರವೇಶ ದ್ವಾರದಲ್ಲಿ ಎರಡೂ ಬದಿಯ ಮೂಲೆಯಲ್ಲಿ ವಿಜಯಗರ  ಶೈಲಿಯ ಹಿಂಗಾಲಿನ ಮೇಲೆ ನಿಂತಿರುವ ಸಿಂಹದ ಕೆತ್ತೆನೆ ಇದ್ದರೆ ಇದಕ್ಕೆ ಹೊಂದಿದಂತೆ ಇರುವ ಪ್ರತ್ಯೆಕ ಎರಡೂ ಕಂಭಗಳಲ್ಲಿ ನಾಲ್ಕು ದಿಕ್ಕಿನಲ್ಲಿ ಸಿಂಹದ ಕೆತ್ತೆನೆ ಇರುವುದು ವಿಷೇಶ. ಇದನ್ನು ಸೇರಿದಂತೆ ಸುಂದರ ಶಿಲಾ ಮೇಲ್ಚಾವಣಿ ಹೊಂದಿದ್ದು ಭಾರಿ ವರ್ಷಾಧಾರೆಯ ಹಿನ್ನೆಯಲ್ಲಿ ಇದಕ್ಕೆ ಹೆಂಚಿನ ಛಾವಣಿ ಹಾಕಲಾಗಿದೆ.  ಮುಖಮಂಟಪದಲ್ಲಿನ ಭುವನೇಶ್ವರಿಯಲ್ಲಿ ಸುಂದರ ಕೆತ್ತೆನೆ ಇದ್ದು ಸುಂದರ ಅಷ್ಟ ದಿಕ್ಪಾಲಕರಾದ ಉಬ್ಬು ಶಿಲ್ಪದ ಕೆತ್ತೆನೆ ಇದೆ. ಇಲ್ಲಿನ ವಾಸ್ತು ಶಿಲ್ಪದ ಕೆತ್ತೆನೆ ಸುಂದರವಾಗಿದ್ದು ಕೆಳದಿ ವಾಸ್ತುವನ್ನ ನೆನಪಿಸುತ್ತದೆ.

ದೇವಾಲಯ ಸುತ್ತಲೂ ಸುಮಾರು ೯ ಕಂಭಗಳಿದ್ದು ಪ್ರತಿ ಕಂಭದ ಮೇಲೂ ಹಿಂಗಾಲಿನ ಮೇಲೆ ನಿಂತ ಭಂಗಿಯ ಸುಂದರ ಸಿಂಹದ ಯಾಳಿಯ ಕೆತ್ತೆನೆ ನೋಡಬಹುದು. ಇದರ ನಡುವೆ ದಕ್ಷಿಣದಿಂದ ಆರಂಭಗೊಂಡಂತೆ ಸುಂದರ ದಶಾವತಾರದ ಬೄಹತ್ ಕೆತ್ತೆನೆ ನಿಜಕ್ಕೂ ನೋಡಲೇ ಬೇಕು ಎನಿಸುವಷ್ಟು ಅದ್ಭುತವಾಗಿದೆ. ಇಲ್ಲಿ ಸುಮಾರು ೩ ರಿಂದ ೪ ಅಡೀ ಎತ್ತರದ ಮತ್ಯ, ಕೂರ್ಮ, ೬ ಅಡಿ ಎತ್ತರದ ವರಾಹಮೂರ್ತಿ, ಸ್ಥಾನಿಕ ಭಂಗಿಯ ಅಂಜಲಿ ಭದ್ದ ನರಸಿಂಹ, ವಾಮನ, ಪರುಶರಾಮ, ಶ್ರೀ ರಾಮ, ಕೄಷ್ಣ, ಭುದ್ದನ ನಗ್ನ ಮೂರ್ತಿ ಹಾಗು ಕಲಿಕ ಯ ಮೂರ್ತಿ ನೋಡಬಹುದು. ಇಲ್ಲಿನ ವರಾಹ ಮೂರ್ತಿಯ ಪ್ರಭಾವಳಿ ಕಲಾತ್ಮಕವಾಗಿದ್ದು ಮತ್ಯವಾತಾರದ ಮೇಲೆ ಸುಂದರ ತೋರಣದ ಕೆತ್ತೆನೆ ಇದ್ದು ಶಿವಲಿಂಗದ ಕೆತ್ತೆನೆ ಇದೆ. ಇಲ್ಲಿ ಪರುಶರಾಮನ ಪಕ್ಕದಲ್ಲಿ ನಾಟ್ಯ ಭಂಗಿಯಲ್ಲಿರುವ ಸುಂದರ ಸ್ತ್ರೀಯ ಕೆತ್ತೆನೆ ಇದೆ.

ಈ ದೇವಾಲಯದ ನಿರ್ಮಾಣದ ಬಗ್ಗೆ ಖಚಿತ ಉಲ್ಲೇಖವಿಲ್ಲದಿದ್ದರೂ ಕೆಳದಿ ನೄಪ ವಿಜಯದಲ್ಲಿ ಈ ದೇವಾಲಯದ ಬಗ್ಗೆ ಉಲ್ಲೇಖವಿದ್ದು ಭಾರಂಗಿ ಎಂಬಲ್ಲಿ ಕೆಳದಿಯ ವೆಂಕಟಪ್ಪ ನಾಯಕ (೧೬ ನೇ ಶತಮಾನ) ದತ್ತಿ ನೀಡಿ ವೀರಾಂಭಪುರವೇಂದು ಹೇಳಿದ ಬಗ್ಗೆ ಉಲ್ಲೇಕವಿದೆ. ಈಗ ಈ ಗ್ರಾಮ ಸುತ್ತ ಎಂದು ಕರೆಯಲಾಗುತ್ತಿದೆ.  ಹಾಗಾಗಿ ಈ ದೇವಾಲಯ ಬಹುಶಹ ೧೫ ರಿಂದ ೧೬ ನೇ ಶತಮಾನದಲ್ಲಿ ನಿರ್ಮಾಣವಾಗಿರಬಹುದು.


ಶ್ರೀನಿವಾಸ ಮೂರ್ತಿ ಎನ್. ಎಸ್.
೨೪/೨೨೭, ಮೊದಲನೇ ಮಹಡಿ, ಶ್ರೀನಿವಾಸ ನಿಲಯ,
೯ನೇ ಕ್ರಾಸ್, ಎನ್ ಆರ್ ಕಾಲೋನಿ,
ಬೆಂಗಳೂರು – ೫೬೦ ೦೧೯
Mobile - 9449553435


No comments:

Pavagada Shaneeswara Temple