Friday, 22 November 2019

Hosa Budunuru Hoysala temples glory

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ಹೊಯ್ಯಳ ರಾಜ ಮನೆತನವೆಂದರೆ ನಮಗೆ ನೆನಪಾಗುವುದೇ ಭವ್ಯವಾದ ದೇವಾಲಯಗಳು. ಇಂತಹ ದೇವಲಾಯಗಳಲ್ಲಿ ಅನಂತ ಪದ್ಮನಾಭ ದೇವಾಲಯಗಳು ಅಪುರೂಪ. ಅಂತಹ ದೇವಾಲಯಗಳ ಹುಡುಕ ಹೊರಟರೆ ನಮಗೆ ನೆನಪಾಗುವುದೇ ಮಂಡ್ಯದ ಸಮೀಪ ಇರುವ ಹೊಸ ಬೂದನೂರಿನ ಅನಂತ ಪಧ್ಮನಾಭ ದೇವಾಲಯ.

ನಗರದ ಮಧ್ಯ ಭಾಗದಲ್ಲಿರುವ ಈ ದೇವಾಲಯ ಸುಂದರವಾಗಿದ್ದು ಎತ್ತರದವದ ಜಗತಿಯ ಮೇಲೆ ಇದ್ದು ಗರ್ಭಗುಡಿ, ಅಂತರಾಳ, ನವರಂಗ ಹಾಗು ಮುಖಮಂಟಪ ಹೊಂದಿದೆ.  ಸುಮಾರು ೧೩ ನೇ ಶತಮಾನಕ್ಕೆ ಸೇರುವ ಈ ದೇವಾಲಯಕ್ಕೆ ಹೊಯ್ಸಳ ದೊರೆ ಮೂರನೇ ನರಸಿಂಹ ೧೨೭೬ ರಲ್ಲಿ ದತ್ತಿ ನೀಡಿದ ಉಲ್ಲೇಖ ಇದೆ.  ಗರ್ಭಗುಡಿಯಲ್ಲಿ ಪೀಠದ ಮೇಲೆ ಸ್ಥಾನಿಕ ಭಂಗಿಯಲ್ಲಿರುವ ಸಮಾರಿ ಐದು ಅಡಿ ಎತ್ತರದ ಸುಂದರ ಅನಂತ ಪಧ್ಮನಾಭನ ಮೂರ್ತಿ ಇದೆ. ಮೂರ್ತಿ ಪದ್ಮ, ಚಕ್ರ, ಗಧಾ ಮತ್ತು ಶಂಖಧಾರಿಯಾಗಿದ್ದು ಪ್ರಭವಾಳಿಯಲ್ಲಿ ಸುಂದರ ದಶಾವತಾರದ ಕೆತ್ತೆನೆ ಇದೆ.  ಎಡಬಲದಲ್ಲಿ ಶ್ರೀ ದೇವಿ – ಭೂದೇವಿಯರ ಕೆತ್ತೆನೆ ಇದೆ.

ನವರಂಗದಲ್ಲಿ ತಿರುಗಣೆಯಿಂದ ಮಾಡಿದ ಸುಂದರ ನಾಲ್ಕು ಕಂಭಗಳಿದ್ದು ವಿತಾನದಲ್ಲಿ ಕಮಲದ ಮೊಗ್ಗಿನ ರಚನೆ ಇದೆ.  ಹೊರ ಭಿತ್ತಿಯಲ್ಲಿ ಯಾವುದೇ ಅಲಂಕಾರಿಕ ಶಿಲ್ಪಗಳ ಕೆತ್ತೆನೆ ಕಾಣ ಬರುವದಿಲ್ಲ.  ಇಲ್ಲೊ ಸುಂದರ ದ್ರಾವಿಡ ಶೈಲಿಯ ಶಿಖರ ಇದೆ.  ಮುಖಮಂಟಪದಲ್ಲಿ ಸಹ ತಿರುಗಣೆಯ ಕಂಭ ಇದ್ದು ಬಾಗಿಲುವಾಡ ಸರಳವಾಗಿದೆ.  ಇಡೀ ದೇವಾಲಯ ಸರಳವಾಗಿದ್ದು ಸುಂದರವಾಗಿದೆ.  ಇಲ್ಲಿ ಅನಂತ ಪದ್ಮನಾಭವ್ರತದಂದು ಇಲ್ಲಿ ವಿಷೇಶ ಪೂಜೆ ನಡೆಯುತ್ತದೆ.

ಇಲ್ಲಿ ಇದೇ ಶೈಲಿಯಲ್ಲಿರುವ ಮತ್ತೊಂದು ದೇವಾಲಯ ಇದ್ದು ಕಾಶಿ ವಿಶ್ವೇಶ್ವರ ದೇವಾಲಯ ಎಂದೇ ಪ್ರಸಿದ್ದಿ ಪಡಿದಿದೆ.  ಈ ದೇವಾಲಯ ಸಹ ಗರ್ಭಗುಡಿ, ಸುಖನಾಸಿ, ನವರಂಗ ಮತ್ತು ಮುಖಮಂಟಪ ಹೊಂದಿದ್ದು ಗರ್ಭಗುಡಿಯಲ್ಲಿ ಪಾಣಿಪೀಠದಲ್ಲಿ ಸುಂದರ ಶಿವಲಿಂಗವಿದೆ.  ಇಲ್ಲಿಯೂ ಸಹ ನವರಂಗದಲ್ಲಿ ಸುಂದರ ನಾಲ್ಕು ಕಂಭಗಳಿದ್ದು ಸುಂದರ ಕೆತ್ತೆನೆಯ ನಂದಿ ಇದೆ.  ನಂದಿಯ ಘಂಟೆಸರ, ಗೆಜ್ಜೆ, ಕಾಲಿನ ಗೆಜ್ಜೆ ಕಲತ್ಮಾಕವಾಗಿ ಕೆತ್ತೆನೆಗೊಂಡಿದೆ.  ನವರಂಗದಲ್ಲಿ ಗಣಪತಿ ಮತ್ತು ಕಾರ್ತಿಕೇಯರ ಶಿಲ್ಪ ಇದ್ದು  ನವಿಲಿನ ಮೇಲ ಕುಳಿತಂತೆ ಇರುವ ಕಾರ್ತಿಕೇಯ ಶಿಲ್ಪ ಮನಮೋಹಕ.  ಇಲ್ಲಿನ ನವರಂಗದ ವಿತಾನದಲ್ಲಿ ಸುಂದರವಾಗಿದ್ದು ಅಷ್ಟ ದಿಕ್ಪಾಲಕರೆ ಕೆತ್ತೆನೆ ವಾದ್ಯಗಾರಗ ಕೆತ್ತೆನೆ ನೋಡಲೇಬೇಕಾದುದು.

 ಬಹುತೇಕ ಅನಂತ ಪಧ್ಮಾನಾಭ ದೇವಾಲಯದ ಸ್ವರೂಪ ಹೋಲುವ ಈ ದೇವಾಲಯದ ಮುಖಮಂಟಪದಲ್ಲಿ ಕಕ್ಷಾಸನ ಇದೆ.  ಈ ದೇವಾಲಯದ ಹೊರಭಿತ್ತಿ ಸಹ ಅಲಂಕಾರರಹಿತವಾಗಿದ್ದು ಸುಂದರ ದ್ರಾವಿಡ್ಯ ಶೈಲಿಯ ಶಿಕರ ಹೊಂದಿದೆ.  ಇಲ್ಲಿ ಕಾರ್ತೀಕ ಮಾಸದಲ್ಲಿ ಸೋಮವಾರ ಹಾಗು ಶಿವರಾತ್ರಿಯಂದು ವಿಷೇಶ ಪೂಜೆ ನಡೆಯುತ್ತದೆ.

ವಿನಾಶದ ಅಂಚಿನಲ್ಲಿದ್ದ  ಎರಡೂ ದೇವಾಲಯಗಳನ್ನು ಈಗ ಧರ್ಮಸ್ಥಳದ ಮಂಜುನಾಥ ಟ್ರಸ್ಟ್ ಹಾಗೂ ಸ್ಥಳೀಯರ ಸಹಕಾರದೊಂದಿಗ ನವಿಕರಿಸಲಾಗಿದೆ.

ತಲುಪುವ ಬಗ್ಗೆ : ಈ ದೇವಾಲಯ ಮಂಡ್ಯದಿಂದ ಸುಮಾರು ಏಳು ಕಿ ಮೀ ದೂರದಲ್ಲಿದ್ದು ಬೆಂಗಳೂರು – ಮದ್ದೂರು – ಹೊಸಬೂದನೂರು ಕ್ರಾಸ್ ನಿಂದ ಬಲಕ್ಕೆ ಸುಮಾರು ಅರ್ಧ ಕಿ ಮೀ ದೂರದಲ್ಲಿ ಹಾಗು ಮೈಸೂರು – ಮಂಡ್ಯ - ಹೊಸಬೂದನೂರು ಕ್ರಾಸ್ ಮೂಲಕ ಸುಲಭವಾಗಿ ತಲುಪಬಹುದು.


ಶ್ರೀನಿವಾಸ ಮೂರ್ತಿ ಎನ್. ಎಸ್.
೨೪/೨೨೭, ಮೊದಲನೇ ಮಹಡಿ, ಶ್ರೀನಿವಾಸ ನಿಲಯ,
೯ನೇ ಕ್ರಾಸ್, ಎನ್ ಆರ್ ಕಾಲೋನಿ,
ಬೆಂಗಳೂರು – ೫೬೦ ೦೧೯
Mobile - 9449553435


No comments:

Pavagada Shaneeswara Temple