Friday, 22 November 2019

Darinayakana Palya Ranagantha temple

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ಕರ್ನಾಟಕದಲ್ಲಿ  ವಿಷ್ಣುವನ್ನು ವಿವಿಧ ರೂಪದಲ್ಲಿ ಆರಾಧಿಸುವ ಪರಂಪರೆ ಇದೆ. ಅಂತರ ಒಂದು ರೂಪವೇ ಶೇಷಶಾಯಿ ರಂಗನಾಥ. ಈ ಸಾಲಿನಲ್ಲಿ ಕಾಣುವ ಅಪುರೂಪದ ಮೂತಿಗಳಲ್ಲಿ ಗೌರಿಬಿದನೂರು ತಾಲ್ಲೂಕಿನ ದಾರಿನಾಯಕನಪಾಳ್ಯದಲ್ಲಿರುವ ಮೂರ್ತಿಯೂ ಒಂದು.  ಶಯನ ಸ್ವರೂಪದಲ್ಲಿರುವ ಈ ಸುಂದರ ಮೂರ್ತಿ ಚತುರ್ಭುಜನಾಗಿದ್ದು ಪಾದದ ಬಳಿ ಶ್ರೀ ದೇವಿ ಮತ್ತು ಭೂದೇವಿ ಇರುವಂತೆ ಕೆತ್ತಲಾಗಿದೆ, ನಾಭಿಯಿಂದ ಬ್ರಹ್ಮ ಉದಯಿಸುವಂತೆ ಕಾಣುವ ಈ ಮೂರ್ತಿ ಇಲ್ಲಿನ ವೆಂಕಟೇಶ್ವರ ದೇವಾಲಯದ ಆವರಣದಲ್ಲಿದ್ದು ಪಾಳೇಗಾರರ ಕಾಲದಲ್ಲಿ ನಿರ್ಮಾಣವಾಗಿದೆ. ಪಕ್ಕದಲ್ಲಿರುವ ದೇವಾಲಯದಲ್ಲಿ ಸುಮಾರು ೫ ಅಡಿ ಎತ್ತರದ ಶ್ರೀ ದೇವಿ ಮತ್ತು ಭೂದೇವಿ ಸಹಿತ ಇರುವ ಸುಂದರ ವೆಂಕಟಶ್ವರನ ಮೂರ್ತಿ ಇದೆ.  ಈ ದೇವಾಲಯ ಗೌರಿಬಿದನೂರಿನಿಂದ ಸುಮಾರು ೧೨ ಕಿ ಮೀ ದೂರದಲ್ಲಿದೆ.


ಶ್ರೀನಿವಾಸ ಮೂರ್ತಿ ಎನ್. ಎಸ್.
೨೪/೨೨೭, ಮೊದಲನೇ ಮಹಡಿ, ಶ್ರೀನಿವಾಸ ನಿಲಯ,
೯ನೇ ಕ್ರಾಸ್, ಎನ್ ಆರ್ ಕಾಲೋನಿ,ಬೆಂಗಳೂರು – ೫೬೦ ೦೧೯
Mobile - 9449553435


No comments:

Pavagada Shaneeswara Temple