Friday, 22 November 2019

Kuppagadde Venugopala Temple

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ಶ್ರಾವಣ ಮಾಸ ಬಂದಿತೆಂದರೆ ಹಲವು ದೇವುರುಗಳ ಅರಾಧನೆಯ ಸಂಬ್ರಮ. ಅಂತಹ ಹಬ್ಬಗಳ ಸರಮಾಲೆಯಲ್ಲಿ ಶ್ರಿ ಕೄಷ್ಣಜನ್ಮಾಷ್ಟಮಿಯೂ ಒಂದು.  ಈ ಹಿನ್ನೆಲಯಲ್ಲಿ ಅಪುರೂಪದ ವೇಣುಗೋಪಲ ಮೂರ್ತಿಗಳ ದರ್ಶನ ಮಾಡುವ ಪ್ರಯತ್ನ ಇಲ್ಲಿದೆ.

ಕುಪ್ಪಗದ್ದೆ ವೇಣುಗೋಪಾಲ ದೇವಾಲಯ :
ಕುಪ್ಪಗದ್ದೆ ಎಂದರೆ ನೆನಪಾಗುವುದು ಇಲ್ಲಿನ ಪ್ರಸಿದ್ಧ ಐತಿಹಾಸಿಕ ೧೧ ನೇ ಶತಮಾನದ ರಾಮೇಶ್ವರ ದೇವಾಲಯ. ಆದರೆ ಇಲ್ಲಿ ಸಮೀಪದ ಚಿಕ್ಕ ಮಂದಿರದಲ್ಲು ಸುಂದರ ವೇಣುಗೋಪಾಲ ಮೂರ್ತಿ ಇದೆ. ಸುಮಾರು ೫ ಅಡಿ ಎತ್ತರದ ಈ ಮೂರ್ತಿ ಉಳಿದ ವೇಣುಗೋಪಲ ಮೂರ್ತಿಗಳಂತೆ ಇರದೆ ಸಾಮಾನ್ಯ ಗೋಪಲಾಕನ ಮೂರ್ತಿಯಂತೆ ಕೆತ್ತೆನೆ ಹೋಂದಿದೆ,  ವೇಣುವಾದನದಲ್ಲಿ ತನ್ಮಯನಾಗಿರುವಂತೆ ಕೆತ್ತೆನೆ ಯಾಗಿದ್ದು ಕಟಿಯಿಂದ ವೈಜಯಂತಿ ಮಾಲೆಯ ಕೆತ್ತೆನೆ ಸುಂದರ  ಮೂರ್ತಿಯ ಎರಡೂ ಬದಿಯಲ್ಲಿ ರುಕ್ಮಿಣಿ ಮತ್ತು ರಾಧೆಯ ಕೆತ್ತೆನೆ ಇದ್ದು ಪೀಠದ ಸುತ್ತಲೂ ಗೋವಿನ ಸುಂದರ ಕೆತ್ತೆನೆ ಇದೆ.  ಪೀಠದಲ್ಲಿ ಯೋಗಿಗಳು ದ್ಯಾನ ಮಾಡುತ್ತಿರುವಂತೆ, ತಾಳವಾದಕರು ಹಿಮ್ಮೇಳದಲ್ಲಿರುವಂತೆ ಇರುವಂತೆ ಇದ್ದು ಮೂರ್ತಿಯ ಪ್ರಭಾವಳಿಯಲ್ಲಿ ದಶಾವತಾರದ ಕೆತ್ತೆನೆ ಹಾಗು ಮೂರ್ತಿಯ ಮೇಲಿನ ಚತ್ರಿಯಾಕರದ ಕೆತ್ತೆನೆ ಸುಂದರ.


ತಲುಪವ ಬಗ್ಗೆ :  ಸೊರಬದಿಂದ ಸುಮಾರು ೧೫ ಕಿ ಮೀ ದೂರದಲ್ಲಿರುವ ತೊಗರ್ಸಿ ಮಾರ್ಗದ ಮೂಲಕ ಅಥವಾ ಅನವಟ್ಟಿಯಿಂದ ನೇರವಾಗಿ ಸುಮಾರು ೧೬ ಕಿ ಮೀ ದೂರದಲ್ಲಿದೆ.


No comments:

Pavagada Shaneeswara Temple