Friday 24 April 2020

Udri Temples

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ಅಪುರೂಪದ ದೇವಾಲಯಗಳನ್ನ ತನ್ನ ನೆಲದಲ್ಲಿ ಹೊಂದಿದ್ದರೂ ಅಜ್ನಾತವಾಗಿಯೇ ಉಳಿದಿರುವ ಒಂದು ಅಪುರೂಪದ ಸ್ಥಳವೆಂದರೆ ಸೊರಬದಿಂದ ಸುಮಾರು ೧೫ ಕಿ ಮೀ ದೂರದಲ್ಲಿರುವ ಉದ್ರಿ. ರಾಜ್ಯದಲ್ಲಿಯೇ ಅಪುರೂಪದ ಭುವನೇಶ್ವರಿಯ ಹೊಂದಿರುವ ದೇವಾಲಯ ಇಲ್ಲಿದೆ. ಮೂಲತಹ ಚುಟು ಶಾತವಾಹನರಿಂದರ ಆಳಲ್ಪಟ್ಟ ಪ್ರದೇಶ ನಂತರ ಕದಂಬರು, ಚಾಲುಕ್ಯರು, ಕಲಚೂರ್ಯರು, ಹೊಯ್ಸಳರು ಹಾಗು ವಿಜಯನಗರ ಕಾಲಕ್ಕೆ ಒಳ ಪಟ್ಟಿತ್ತು. ಉದ್ದುರೆ ಉದ್ದಾಪುರ ಎಂದು ಕರೆಯುತ್ತಿದ್ದ ಈ ಊರಿ ಜಿದ್ದುಲಿಗೆ ನಾಡಿನ ಕಾಲದಲ್ಲಿ ಪ್ರಮುಖ ಕೇಂದ್ರವಾಗಿದ್ದು.  ನಂತರ ಹೊಯ್ಸಳ ದೊರೆ ವೀರ ಬಲ್ಲಾಳನ ಕಾಲದಲ್ಲಿ ಬನವಾಸಿಯ ಪ್ರಾದೇಶಿಕ ಕೇಂದ್ರವಾಗಿತ್ತು. ಈಗ ಚಿಕ್ಕ ಗ್ರಾಮವಾಗಿದ್ದು ತನ್ನ ಒಡಲಿನಲ್ಲಿ ಹಲವು ಕಥೆಗಳ ಸಾಕ್ಷಿಯಾಗಿ ನಿಂತಿದೆ.

ಶಿವ ದೇವಾಲಯ :
ಇಲ್ಲಿನ ಪ್ರಮುಖ ದೇವಾಲಯವಾದ ಈ ದೇವಾಲಯ ಮೂಲತಹ ಜೈನ ದೇವಾಲಯ. ಸುಖನಾಸಿಯಲ್ಲಿನ ದ್ವಾರಬಂಧದ ಜೈನ ಶಿಲ್ಪಗಳು ಇಲ್ಲಿನ ಶಾಸನಗಳು ಇದನ್ನ ಸ್ಫುಷ್ಟೀಕರಿಸುತ್ತವೆ. ಈ ದೇವಾಲಯ ಗರ್ಭಗುಡಿ, ಸುಖನಾಸಿ, ಮತ್ತು ನವರಂಗ ಹೊಂದಿದ್ದು, ಗರ್ಭಗುಡಿಯಲ್ಲಿ ಶಿವಲಿಂಗವಿದೆ.  ಸುಖನಾಸಿಯಲ್ಲಿ ನಂದಿ ಇದ್ದು ದ್ವಾರಬಂದದಲ್ಲಿ ಸುಂದರ ಜಾಲಂದ್ರಗಳು ಮತ್ತು ಲಲಾಟದಲ್ಲಿ ಗಜಲಕ್ಷ್ಮೀ ಚಿತ್ರ ಇದೆ.

ಈ ದೇವಾಲಯದ ನವರಂಗದಲ್ಲಿ ಸುಂದರವಾದ ಪದ್ಮ ಹಿಡಿದಿರುವ ಯಕ್ಷೀ, ಗಣೇಶ, ಷಣ್ಮುಖ ಮತ್ತು ಸಪ್ತಮಾತೃಕೆ ಶಿಲ್ಪಗಳಿವೆ. ಈ ದೇವಾಲಯದ ವಿಷೇಶವೆಂದರೆ ಇಲ್ಲಿನ ಭುವನೇಶ್ವರಿಯಲ್ಲಿನ ಕೆತ್ತೆನೆ.  ಐದು ವೄತ್ತಾಕರದ ಎಳೆಗಳ ಸುಂದರ ಕೆತ್ತೆನೆ ಹೊಂದಿರುವ ಇದು ರಾಜ್ಯದ ಭುವನೇಶ್ವರಿಯಲ್ಲಿನ ಕಾಣ ಬರುವ ಅಪುರೂಪದ ಅಧ್ಬುತ ಕೆತ್ತೆನೆ. ಈ ದೇವಾಲಯದ ಆವರಣದಲ್ಲಿನ ಹಲವು ಶಾಸನಗಳು ಇದ್ದು ಅಪುರೂಪದ ಮಹಾಸತಿ ಕಲ್ಲುಗಳು ಇವೆ.  ಸುಮಾರು ೫ ರಿಂದ ೭ ಅಡಿ ಎತ್ತರದ ಈ ಮಹಸತಿಯ ಕಲ್ಲುಗಳು ವಿಷೇಶವಾಗಿದೆ.

ಶ್ರೀ ಲಕ್ಷ್ಮೀ ನಾರಾಯಣ ದೇವಾಲಯ :
ಊರಿನ ಮಧ್ಯ ಭಾಗದಲ್ಲಿರುವ ಈ ದೇವಾಲಯ ಗರ್ಭಗುಡಿ ಮತ್ತು ಸುಖನಾಸಿ ಮಾತ್ರ ಹೊಂದಿದ್ದು ಉಳಿದ ಭಾಗ ನಾಶವಾಗಿದೆ.  ಗರ್ಭಗುಡಿಯಲ್ಲಿ ಪದ್ಮಪೀಠದ ಮೇಲೆ ಸುಮಾರು ೩ ೧/೨ ಅಡಿ ಎತ್ತರದ ಅಸೀನ ಭಂಗಿಯಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣನ ಶಿಲ್ಪವಿದೆ.  ಶಿಲ್ಪದ ಸುತ್ತಲೂ ಸುಂದರವಾದ ಮಕರ ತೋರಣದ ಪ್ರಭಾವಳಿ ಇದೆ.  ಪ್ರಭಾವಳಿಯಲ್ಲಿ ದಶಾವತಾರದ ಕೆತ್ತೆನೆ ಇದೆ. ನಾರಾಯಣನ ಶಿಲ್ಪದಲ್ಲಿ ಸುಂದರ ಕಿರಿಟ ಇದ್ದು ಕೊರಳಿನಲ್ಲಿ ಕಂಠೀಹಾರ, ಯಜ್ನೋಪವೀತ ಇದೆ.  ಬಲಗೈನಲ್ಲಿ ಶಂಖ ಇದ್ದು ಎಡಗೈ ಲಕ್ಷ್ಮೀಯನ್ನು ಬಳಸಿರುವಂತೆ ಇದ್ದು ಲಕ್ಷ್ಮೀಯ ಮುಖ ನಾರಾಯಣನನ್ನು ನೋಡುತ್ತಿರುವಂತೆ ಇದೆ. ಉಳಿದ ಕೈನಲ್ಲಿ ಗದೆ ಮತ್ತು ಚಕ್ರ ಇದೆ.  ದೇವಿಯ ಶಿಲ್ಪದ ಮೇಲೆ ಚಿಕ್ಕ ಆಭರಣವಿದ್ದು ಕಂಠದಲ್ಲಿ ಪದಕದ ಹಾರವಿದೆ. ಶಿಲ್ಪದ ಪೀಠದಲ್ಲಿ ಗರುಡನ ಕೆತ್ತೆನೆ ಇದೆ.  ದೇವಿಯ ಕಾಲಿನ ಪಾದುಕೆ ಗೆಜ್ಜೆಗಳು ಹಾಗು ಪಕ್ಕದಲ್ಲಿ ಭಕ್ತನ ಕೆತ್ತೆನೆ ಇದೆ.

ಶಿವ ದೇವಾಲಯ :
 ಇಲ್ಲಿಂದ ಅನತಿ ದೂರದಲ್ಲಿ ವಿನಾಶದ ಅಂಚಿನಲ್ಲಿರುವ ಒಂದು ಶಿವ ದೇವಾಲಯ ಇದೆ.  ಗರ್ಭಗುಡಿಯಲ್ಲಿ ಶಿವಲಿಂಗ ಇದ್ದು ಸುಖನಾಸಿಯಲ್ಲಿ ದ್ವಾರ ಮಾತ್ರ ಇದ್ದು ಸುಂದರವಾದ ಬಾಗಿಲುವಾಡ ಇದೆ. ಇಲ್ಲಿನ ಹೊರ ಭಾಗದಲ್ಲಿ ಭಾಗಶಃ ಹಾಳಾಗಿರುವ ಸುಂದರ ಮಹಿಷಾಸುರ ಮರ್ಧಿನಿಯ ಮೂರ್ತಿ ಇದೆ.

ತಲುಪವ ಬಗ್ಗೆ : ಸೊರಬದಿಂದ ಸುಮಾರು ೧೫ ಕಿ ಮೀ ದೂರದಲ್ಲಿದೆ.  ಶಿವಮೊಗ್ಗ – ಷಿಕಾರಿಪುರ – ಶಿರಾಳಕೊಪ್ಪ – ತೊಗರ್ಸಿ – ಉದ್ರಿ ತಲುಪಬಹುದು. ಆನವಟ್ಟಿಯ ಮೂಲಕ ಬರುವವರು ಕುಪ್ಪಗುದ್ದೆಯ ಮೂಲಕ ಉದ್ರಿ ತಲುಪಬಹುದು.

ಸಮೀಪದ ಕುಪ್ಪಗದ್ದೆಯ ದೇವಾಲಯಗಳ ಸಂಕೀರ್ಣ, ತೊಗರ್ಸಿಯ ಮಲ್ಲಿಕಾರ್ಜುನ ದೇವಾಲಯ ಆನಬಟ್ಟಿಯ ಕೋಟಿಪುರದ ಕೈಟಭೇಶ್ವರ ದೇವಾಲಯಗಳನ್ನು ನೋಡಬಹುದು.


ಶ್ರೀನಿವಾಸ ಮೂರ್ತಿ ಎನ್. ಎಸ್.
೨೪/೨೨೭, ಮೊದಲನೇ ಮಹಡಿ, ಶ್ರೀನಿವಾಸ ನಿಲಯ,
೯ನೇ ಕ್ರಾಸ್, ಎನ್ ಆರ್ ಕಾಲೋನಿ,
ಬೆಂಗಳೂರು – ೫೬೦ ೦೧೯
Mobile - 9449553435


No comments:

Pavagada Shaneeswara Temple