¯ÉÃRPÀgÀÄ :²æäªÁ¸À
ªÀÄÆwðJ£ï.J¸ï.
ಕರ್ನಾಟಕ ಇತಿಹಾಸದಲ್ಲಿ ಹಲವು
ಶೈಲಿಯ ದೇವಾಲಯಗಳು ನಿರ್ಮಾಣಗೊಂಡಿವೆ. ಆದರೆ ತಮ್ಮ ಸಿಮೀತ ಮಿತಿಯಲ್ಲಿ ಸ್ಥಳೀಯ ಮಾಂಡಲೀಕರು
ಮತ್ತು ಪಾಳೇಗಾರರು ತಮ್ಮದೇ ಆದ ಶೈಲಿಯಲ್ಲಿ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಚಿತ್ರದುರ್ಗ ಜಿಲ್ಲಿಯ ಮಾಳೇನಹಳ್ಳಿಯ ಶ್ರೀ
ರಂಗನಾಥ ದೇವಾಲಯವು ಒಂದು.
ಕ್ರಿ ಶ ೧೫೮೦ ರಲ್ಲಿ ಪಾಳೇಗಾರ
ತಿಮ್ಮಣ್ಣ ನಾಯಕರ ಮಾರ್ಗದರ್ಶಕರಾಗಿದ್ದ ಶ್ರೀ ವೆಂಕಪ್ಪಯ್ಯನವರಿಂದ ನಿರ್ಮಾಣವಾದ ಈ ದೇವಾಲಯ
ಗರ್ಭಗುಡಿ, ಸುಕನಾಸಿ, ತೆರೆದ ಮಂಟಪ (ನವರಂಗ) ಮತ್ತು ಪ್ರತ್ಯೇಕ ಪ್ರವೇಶ ಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ
ಸುಂದರ ನಾಲ್ಕು ಅಡಿ ಎತ್ತರದ ಶ್ರೀ ರಂಗನಾಥನ
ಮೂರ್ತಿ ಇದೆ. ಸುಂದರ ಪ್ರಭಾವಳಿ ಹೊಂದಿದ್ದು
ಕೈನಲ್ಲಿನ ಶಂಖ, ಚಕ್ರ ಮತ್ತು ಗಧೆಯ ಕೆತ್ತೆನೆ
ಸುಂದರವಾಗಿದೆ.
ತೆರೆದ ಮಂಟಪದಲ್ಲಿ ಆರು
ಕಂಭಗಳಿದ್ದು ಅದರಲ್ಲಿನ ಉಬ್ಬು ಶಿಲ್ಪಗಳ ಕೆತ್ತೆನೆ ಸುಂದರವಾಗಿದೆ. ಆಂಜನೇಯ, ನವನೀತ ಕೄಷ್ಣ, ನರಸಿಂಹ, ವೇಣುಗೋಪಾಲ
ಮುಂತಾದ ಸುಂದರ ಉಬ್ಬು ಶಿಲ್ಪಗಳಿವೆ. ಈ ದೇವಾಲಯದ ವೈಶಿಷ್ಟ ಇರುವುದು ಪ್ರವೇಶ ಮಂಟಪದಲ್ಲಿ. ಇಲ್ಲಿಯೂ ಸುಂದರ ಉಬ್ಬು ಶಿಲ್ಪಗಳ ಕೆತ್ತೆನೆಯ ೪
ಕಂಭಗಳಿದ್ದು ಇದನ್ನೇ ರಾಜಗೋಪುರವಾಗಿ ಪರಿವರ್ತಿಸಲಾಗಿದೆ. ಕಂಭಗಳಲ್ಲಿ ಮೊಸರಿನಿಂದ ಬೆಣ್ಣೆ
ಕಡೆಯುವ, ಶಿವಲಿಂಗಕ್ಕೆ ನಂದಿ ಹಾಲು ಎರೆಯುವ ಶಿಲ್ಪಗಳ ಉಬ್ಬು ಕೆತ್ತೆನೆ ನೋಡಲೇ
ಬೇಕಾದದ್ದು. ಎರಡನೆ ಹಂತದಲ್ಲಿ ೧೨ ಕಂಭಗಳ ಮಂಟಪ ಇದ್ದರೆ ಮೂರನೇ ಮತ್ತು ನಾಲ್ಕನೇ ಮಹಡಿಯಲ್ಲಿ ಚಿಕ್ಕ ಮಂಟಪವಿದೆ. ಇದರ
ಮೇಲೆ ಕಳಸವನ್ನು ಸ್ಥಾಪಿಸಲಾಗಿದೆ. ಈ ದೇವಾಲಯಕ್ಕೆ ಗರ್ಭಗುಡಿಯ ಮೇಲೆ ನಾಗರ ಶೈಲಿಯ ಚಿಕ್ಕ ಶಿಖರವಿದೆ.
ದೇವಾಲಯದ ಆವರಣದಲ್ಲಿ ಲಕ್ಷ್ಮೀ, ಆಂಜನೇಯ ಮತ್ತು ಶಿವ ಚಿದಂಬರರ ಚಿಕ್ಕ ಗುಡಿಗಳಿವೆ.
ಶ್ರೀ ಶಂಕರಲಿಂಗರರು ಇಲ್ಲಿಗೆ ಬಂದು ನೆಲೆಸಿದಾಗ ಈ ದೇವಾಲಯಗಳನ್ನು ೧೯೪೨ ರಲ್ಲಿ ಊರಿನ ಸಹಕಾರದಿಂದ ಜೀರ್ಣೋದ್ದಾರ
ಮಾಡಿದರು. ಲಕ್ಷ್ಮೀದೇವಿಯ ವಿಗ್ರಹವನ್ನು ಈ ಸಮಯದಲ್ಲಿಯೇ ಭಿನ್ನವಾದ ವಿಗ್ರಹದ ಬದಲಾಗಿ
ಸ್ಥಾಪಿಸಲಾಯಿತು. ಇಲ್ಲಿನ ಆವರಣದಲ್ಲಿ ಗುರುಗಳ ಯೋಗಮಂದಿರವಿದ್ದು ಭಕ್ತರು ಇಲ್ಲಿಗೆ ಬರುತ್ತಾರೆ.
ಈಗ ದೇವಾಲಯವನ್ನು ಹಳೆಯ
ಸ್ವರೂಪವನ್ನು ಹಾಗೇಯೆ ಉಳಿಸಿ ಸಾಕಷ್ಟು ನವೀಕರಿಸಲಾಗಿದ್ದು ಆಧುನಿಕ ಸ್ಪರ್ಶ ಪಡೆದಿದೆ. ನಿತ್ಯ
ಪೂಜೆ ಇರುವ ಇಲ್ಲಿ ಭಕ್ತರು ನಿತ್ಯ ಬೇಟಿ ನೀಡುತ್ತಾರೆ. ಇಲ್ಲಿ ರಥ ಸಪ್ತಮಿಯಂದು ಬ್ರಹ್ಮ ರಥೋತ್ಸವ ನಡೆಯುತ್ತದೆ. ಈ ಸಮಯದಲ್ಲಿ ಷಷ್ಟಿಯಂದು ಕಲ್ಯಾಣೋತ್ಸವ ಮತ್ತು
ಸಪ್ತಮಿಯಲ್ಲಿ ಹೋಮ ನಡೆಯುತ್ತದೆ. ಇಲ್ಲಿ
ಭೂತಪ್ಪನಿಗೆ ಎಡೆ ಇಡುವುದು ವಿಷೇಶ.
ತಲುಪವ ಬಗ್ಗೆ : ಮಾಳೇನಹಳ್ಳಿ
ಹೊಳಲ್ಕೆರೆ ರೈಲ್ವೆ ನಿಲ್ದಾಣದಿಂದ ೩ ಕಿ ಮೀ ದೂರದಲ್ಲಿದು ಚಿತ್ರದುರ್ಗ – ಹೊಳಲ್ಕೆರೆ
ಮಾರ್ಗವಾಗಿ ಅಥವಾ ಶಿವಮೊಗ್ಗ – ಚನ್ನಗಿರಿ ಮಾರ್ಗವಾಗಿಯೂ ತಲುಪಬಹುದು. ಹತ್ತಿರದಲ್ಲಿ ಹೊಳಲ್ಕೆರೆ
ರೈಲ್ವೆ ನಿಲ್ದಾಣವಿದೆ. ಹತ್ತಿರದಲ್ಲಿರುವ ಹೊಳಲ್ಕೆರೆಯಲ್ಲಿನ ಜಡೆ ಗಣಪತಿ, ವೇಣುಗೊಫಾಲ ಮತ್ತು ವೀರಭದ್ರ ದೇವಾಲಯ ನೋಡಬಹುದು.
ಶ್ರೀನಿವಾಸ ಮೂರ್ತಿ ಎನ್. ಎಸ್.
೨೪/೨೨೭, ಮೊದಲನೇ ಮಹಡಿ, ಶ್ರೀನಿವಾಸ ನಿಲಯ,
೯ನೇ ಕ್ರಾಸ್, ಎನ್ ಆರ್ ಕಾಲೋನಿ,
ಬೆಂಗಳೂರು – ೫೬೦ ೦೧೯
Mobile -
9449553435
No comments:
Post a Comment