Friday 24 April 2020

Gunjiganuru Kumbeshwara Temple





ಚಿತ್ರದುರ್ಗ ಜಿಲ್ಲ್ಲೆಯ ದೇವಾಲಯಗಳೆಂದರೆ ನಮ್ಮ ಕಣ್ಣ ಮುಂದೆ ಬರುವುದು ಪಾಳೇಗಾರಗು ಕಟ್ಟಿದ ದೇವಾಲಯಗಳು. ಜಿಲ್ಲೆಯ ಬಹುತೇಕ ಕಾಣ ಬರುವುದು ಇವರ ನಿರ್ಮಿತ ದೇವಾಲಯಗಳೇ. ಇವುಗಳನ್ನು ಹೊಯ್ಶಳ ನಿರ್ಮಿತ ದೇವಾಲಗಳಿದ್ದರೂ ಪಕ್ಕಕ್ಕೆ ಹೊಂದುಕೊಂಡಂತೆ ಇರುವ ದಾವಣಗೆರ ಜಿಲ್ಲಿಯಲ್ಲಿ ಕಾಣ ಬರುವ ಕಲ್ಯಾಣ ಚಾಲುಕ್ಯರ ದೇವಾಲಯಗಳಲ್ಲಿ ವಿರಳ.  ಅವುಗಳಲ್ಲಿ ಅಪುರೂಪದ ದೇವಾಲಯವೆಂದರ ಹೊಳಲ್ಕೆರೆ ತಾಲ್ಲೂಕಿನ ಗುಂಜಿಗನೂರಿನಲ್ಲಿರುವ ಕಲ್ಯಾಣ ಚಾಲುಕ್ಯ ನಿರ್ಮಿತ ಕುಂಭೇಶ್ಬರ ದೇವಾಲಯ.


ದೇವಾಲಯದಲ್ಲಿನ ಶಾಸನ ಹೇಳುವಂತೆ ಈ ದೇವಾಲಯದ ನಿರ್ಮಿತಿ ಸುಮಾರು ೧೨ ನೇ ಶತಮಾನದ ಆರಂಭ.  ಹೊರ ಭಾಗದಲ್ಲಿ ನೋಡಿದರೆ ನವೀಕರಣಗೊಂಡ ಸಾಧಾರಣ ದೇವಾಲಯದಂತೆ ಕಾಣ ಬಂದರೂ ಒಳ ಭಾಗದಲ್ಲಿ ಪ್ರವೇಶ ಮಾಡಿದರೆ ಕಲ್ಯಾಣ ಚಾಲುಕ್ಯರ ವಾಸ್ತು ಶಿಲ್ಪದ ಅಪುರೂಪದ ದರ್ಶನ ಕಾಣ ಸಿಗುತ್ತದೆ.  ನವರಂಗದ ಕಂಭದಲ್ಲಿನ ಕೆಳಭಾಗದಲ್ಲಿ ಮಾಡಿದ ಅಧುನಿಕ ಸೇರ್ಪಡೆ ಹೊರತು ಪಡಿಸಿದರೆ (ಅಕ್ಕಮಹಾದೇವಿ ಮತ್ತು ಲಿಂಗ) ಉಳಿದ ಶಿಲ್ಪಗಳೆಲ್ಲ ಚಾಲುಕ್ಯರ ಕಾಲದವು.  ಈ ದೇವಾಲಯ ಚಾಲುಕ್ಯ ನಿರ್ಮಿತ ತ್ರೈಪುರಷ ದೇವಾಲಯಗಳಲ್ಲಿ ಒಂದು. ಆದರೆ ಇಲ್ಲಿ ಬ್ರಹ್ಮನ ಬದಲಾಗಿ ಸೂರ್ಯನ ಶಿಲ್ಪವಿದೆ.


ಮೂಲತಹ ತ್ರಿಕುಟಾಚಲ ದೇವಾಲಯವಾದ ಈ ದೇವಾಲಯ ಒಂದು ಮುಚ್ಚಿದ ಗರ್ಭಗುಡಿ ಹಾತು ಎರಡು ತೆರೆದ ಗರ್ಭಗುಡಿ ಹೊಂದಿದೆ. ಮುಖ್ಯ ಗರ್ಭಗುಡಿಯಲ್ಲಿ ಶಿವಲಿಂಗ (ಕುಂಭೇಶ್ವರ) ಇದ್ದು ಚೌಕಾಕಾರದ ಪಾಣಿ ಪೀಠ, ರುದ್ರಭಾಗ ಹೊಂದಿದೆ.  ಎದುರು ಭಾಗದಲ್ಲಿ ನಂದಿ ಇದೆ.  ದಕ್ಷಿಣಾಭಿಮುಖವಾಗಿ ಇರುವ ಗರ್ಭಗುಡಿಯಲ್ಲಿ ವಿಷ್ಣುವಿನ (ಸ್ಥಳಿಯವಾಗಿ ರಂಗನಾಥ ಎಂದು ಕರೆಯುವ) ಮೂರ್ತಿ ಇದೆ. ಸುಮಾರು ೫ ಅಡಿ ಎತ್ತರದ ಮೂರ್ತಿ ಆಭಯ, ಶಂಖ, ಚಕ್ರ ಮತ್ತು ಗಧೆ ಹಿಡಿದಿದ್ದು ಪೀಠದಲ್ಲಿ ಗರುಡನ ಕೆತ್ತೆನೆ ಇದೆ. ಪ್ರಭಾವಳಿಯಲ್ಲಿ ದಶಾವಾತರದ ಕೆತ್ತೆನೆ ಇದ್ದ್ದು ಬದಿಯಲ್ಲಿ ಶ್ರೀ ದೇವಿ ಮತ್ತು ಭೂ ದೇವಿಯ ಕೆತ್ತೆನೆ ಇದೆ. ಪಶ್ಚಿಮಕ್ಕಿರುವ ಗರ್ಭಗುಡಿಯಲ್ಲಿ ಸೂರ್ಯನ ಶಿಲ್ಪವಿದ್ದು ಪೀಟದಲ್ಲಿ ಸಪ್ತಾಶ್ವವಿದ್ದು ಎರಡು ಕೈಗಳಲ್ಲಿ ಕಮಲದ ಮೊಗ್ಗು ಹಿಡಿದಂತೆ ಕೆತ್ತೆನ ಇದೆ. ಪ್ರಭಾವಳಿಯಲ್ಲಿ ದ್ವಾದಶ ಆದಿತ್ಯ ಕೆತ್ತೆನೆ ಇದೆ. ನವರಂಗದಲ್ಲೂ ಮತ್ತೊಂದು ಸೂರ್ಯನ ಶಿಲ್ಪವಿದೆ.

ಗರ್ಬಗುಡಿಯ ಲಲಾಟದಲ್ಲಿ ಗಜಲಕ್ಶ್ಮಿಯ ಕೆತ್ತೆನೆ ಇದ್ದು ಅಂತರಾಳಕ್ಕೆ ಹೊಂದಿಕೊಂಡಂತೆ ನವರಂಗ ಇದೆ. ಇಲ್ಲಿ ಚಾಲುಕ್ಯರ ಕಾಲದ ನಾಲ್ಕು ಕಂಬಗಳಿವೆ. ಇಲ್ಲಿ ಚೌಕ ಬಾಗದಲ್ಲಿನ ಅಕ್ಕಮಹಾದೇವಿ ಮತ್ತು ಶಿವಲಿಂಗದ ಆದುನಿಕ ಕೆತ್ತೆನೆ ಹೊರತು ಪಡಿಸಿದರೆ ಉಳಿದಂತೆ ವೃತ್ತಾಕಾರ ಮತ್ತು ಸರಳ ಬೋದಿಗೆ ಹೊಂದಿದೆ.  ವಿತಾನದಲ್ಲಿ ಪದ್ಮದ ಸರಳ ಕೆತ್ತೆನೆ ಇದೆ. ನವರಂಗದಲ್ಲಿ ಆಸೀನ ಬಂಗಿಯಲ್ಲಿರುವ ಅಪುರೂಪದ ಬೈರವನ ಶಿಲ್ಪ ಇದೆ.  ಕೈನಲ್ಲಿ ಕತ್ತಿ ಮತ್ತು ಕಪಾಲ ಹಿಡಿದಿರುವ ನಗ್ನ ಮೂರ್ತಿ ಸುತ್ತ ಪ್ರಬಾವಳಿ ಇದೆ. ಪಕ್ಕದಲ್ಲಿ ಕತ್ತಿ, ತ್ರಿಶೂಲ, ಡಮರುಗ ಮತ್ತು ಕಪಾಲ ಹಿಡಿದಿರುವ ದುರ್ಗಿಯ ಶಿಲ್ಪ ಹಾಗು ಸರಸ್ವತಿ ಹಾಗು ಗಣಪತಿಯ ಶಿಲ್ಪವಿದೆ. ಮೂಲತಹ ಸಂಪೂರ್ಣ ಮಣ್ಣಿನಲ್ಲಿ ಮುಚ್ಚಿದ್ದ ಈ ದೇವಾಲಯವನ್ನು ಮಣ್ಣು ತೆಗೆದು ನವೀಕರಸಿಲಾಗಿದ್ದು ಇದ್ದ ಶಿತಿಲ ಗೋಪುರ ತೆಗುದು ಹಾಕಲಾಗಿದೆ. ಇಂತಹ ಅಪುರೂಪದ ದೇವಾಲಯ ಯಾರ ಗಮನಕ್ಕೂ ಬಾರದೇ (ಪುರಾತತ್ವ ಇಲಾಖೆಗೂ) ಇರುವುದು ದುರಂತ. 

ದೇವಾಲಯವನ್ನು ತಲುಪಲಿ ಹೊಳಲ್ಕೆರೆ – ದಾವಣಗೆರೆ ಮಾರ್ಗದಲ್ಲಿ ಚಿಕ್ಕಜಾಜೂರಿನ ನಂತರ ಗುಂಜಿಗನೂರು ಎಂದು ಕಾಣುವ ದಾರಿಯಲ್ಲಿ ಬಲಕ್ಕೆ ಸಾಗಿದರೆ ಸಿಗುತ್ತದೆ. ಹೊಳಲ್ಕೆರೆಯಿಂದ ಸುಮಾರು ೧೦  ಕಿ ಮೀ ದೂರದಲ್ಲಿದೆ.

ಶ್ರೀನಿವಾಸ ಮೂರ್ತಿ ಎನ್. ಎಸ್.
೨೪/೨೨೭, ಮೊದಲನೇ ಮಹಡಿ, ಶ್ರೀನಿವಾಸ ನಿಲಯ,
೯ನೇ ಕ್ರಾಸ್, ಎನ್ ಆರ್ ಕಾಲೋನಿ,
ಬೆಂಗಳೂರು – ೫೬೦ ೦೧೯
Mobile - 9449553435




No comments:

Pavagada Shaneeswara Temple