Tuesday, 28 April 2020
Monday, 27 April 2020
Muthakuru Sri Lakshmi Narayana Temple
Hariharapura Sri Sharada Peetham
ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್
ಶ್ರೀ ಶಂಕರಾಚಾರ್ಯರು ನಾಲ್ಕು ದಿಕ್ಕಿನಲ್ಲಿ ಪೀಠ
ಸ್ಥಾಪಿಸಲು ಪ್ರವಾಸ ಮಾಡುವಾಗ ನಾಡಿನ ಹಲವು ಸ್ಥಳಗಳಿಗೆ ಭೇಟಿ ನೀಡಿ ತಮ್ಮ ಅಧ್ಯಾತ್ಮದ
ಚಿಂತನೆಯನ್ನ ಪಸರಿಸಿದ್ದಾರೆ. ಆ ಸಮಯದಲ್ಲಿ ಹಲವು
ಸ್ಥಳಗಳ ಪ್ರಶಾಂತತೆ, ಭಕ್ತಿ ಮತ್ತು ಅಧ್ಯಾತ್ಮತೆಯ ಪರಿಸರಕ್ಕೆ ಮನಸೋತರೂ ಪೀಠ ಸ್ಥಾಪಿಸುಲು
ಪೂರಕವಾದ ಪರಿಸರ ಕಾಣದ ಕಾರಣ ಅಲ್ಲಿ ಶ್ರೀ ಚಕ್ರವನ್ನು ಪ್ರತಿಷ್ಟಾಪಿಸಿ ಅದನ್ನು ಪೂಜಿಸಲು
ಅರಾಧಿಸಲು ಬಿಟ್ಟು ಹೋಗುತ್ತಾರೆ. ಅಂತಹ ಶ್ರೀ ಶಂಕರಾಚಾರ್ಯಾದಿಂದ ಸ್ಥಾಪಿಸಿಲ್ಪಟ್ಟ ಶ್ರೀ
ಚಕ್ರಗಳು ದೇಶದ ಹಲವೆಡೆ ಪೂಜಿಸಲ್ಪಡುತ್ತಿದ್ದು ಕರ್ನಾಟಕದಲ್ಲೂ ಅವು ಪೂಜೆಗೊಳ್ಳುತ್ತಿವೆ. ಅಂತಹ ಪ್ರಮುಖ ಕ್ಷೇತ್ರಗಳಲ್ಲಿ ಎದ್ದು ಕಾಣುವುದೇ
ಶೃಂಗೇರಿ. ಅದರ ಹತ್ತಿರದಲ್ಲೇ ಇರುವ
ಶಂಕರಾಚಾರ್ಯರಿಂದ ಶ್ರೀ ಚಕ್ರವನ್ನು ಪ್ರತಿಷ್ಟಾಪಿಸಿದ ಮತ್ತೊಂದು ಪೀಠವಿದೆ. ಅದುವೇ ಹರಿಹರಪುರ ಶ್ರೀ ಆದಿಶಂಕರಾಚಾರ್ಯ ಶಾರದಾ
ಲಕ್ಶ್ಮೀ ನರಸಿಂಹ ಪೀಠಮ್ - ಶ್ರೀ ಶಾರದಾ ಪೀಠ
ಶ್ರೀ ಶಂಕರಾಚಾರ್ಯರು ಭಾರತದಲ್ಲಿ ಧರ್ಮ ಪ್ರಚಾರದ
ನಿಮಿತ್ತ ಭಾರತ ಪ್ರವಾಸ ಕಾಲದಲ್ಲಿ ದಕ್ಷಿಣದಲ್ಲಿ ಪೀಠ ಸ್ಥಾಪನೆಗೆ ಜಾಗ ಅರುಸುತ್ತಿರುವಾಗ ಈ
ಕ್ಷೇತ್ರಕ್ಕೆ ಬಂದಿದ್ದರು. ಆಗ ಅಲ್ಲಿ ನರಸಿಂಹ ದೇವರ ಪೂಜೆ ನಿರ್ವಹಿಸುತ್ತಾ ಇದ್ದ ಶ್ರೀ ಕೃಷ್ಣ
ಯೋಗಿಂದ್ರರ ಸನ್ನಿಧಾನದಲ್ಲಿ ಇಲ್ಲಿನ ಸುಂದರ ಪರಿಸರ ಕಂಡು ತಮ್ಮ ಅಧಿ ದೇವತೆಯಾಗಿದ್ದ ಶ್ರೀ
ಶಾರದಾ ಮಾತೆಯನ್ನು ತುಂಗಾ ನದಿ ತೀರದಲ್ಲಿ ಶ್ರೀ ಚಕ್ರದ ಮೂಲಕ ಸ್ಥಾಪಿಸಿ ಉಪಾಸನೆಯ
ನಿರ್ವಹಣೆಯನ್ನು ಶ್ರೀ ಕೃಷ್ಣ ಯೋಗೀಂದ್ರರಿಗೆ ಒಪ್ಪಿಸಿ ಮುಂದೆ ಶೃಂಗೇರಿಗೆ ಪ್ರಯಾಣ ಬೆಳಸಿದರು.
ನಂತರ ಕಾಲದಲ್ಲಿ ಶೃಂಗೇರಿಯಲ್ಲಿ ಪೀಠ ಸ್ಥಾಪಿತವಾದ ನಂತರ ಪ್ರಥಮ ಪೀಠಾದೀಶ ಶ್ರೀ
ಸುರೇಶ್ವಾರಾಚಾರ್ಯರು ಶ್ರೀ ಕೃಷ್ಣ ಯೋಗೀಂದ್ರರಿಗೆ ಸಂನಾಸ್ಯ ದೀಕ್ಷೆ ನೀಡಿ ಇಲ್ಲಿ ಶ್ರೀ ಶಾರದಾ
ಪೀಠ ಸ್ಥಾಪನೆಯಾಗಿ ಇಂದಿಗೂ ಪೂಜೆ ನಡೆಯುತ್ತಿದೆ.
ಸ್ಥಳ ಪುರಾಣದಂತೆ ಸಿದ್ದಿ ಕ್ಷೇತ್ರವಾದ ಇಲ್ಲಿ ದಕ್ಷ
ಪ್ರಜಾಪತಿಯು ಇಲ್ಲಿ ಮಹಾಯಾಗ ಮಾಡಿದ್ದು ಶಿವನೇ ಇಲ್ಲಿ ಎಲ್ಲರನ್ನು ಅನುಗ್ರಹಸಿದ ಎಂಬ ನಂಬಿಕೆ
ಇದೆ. ಇಲ್ಲಿನ ಅರಣ್ಯದ ನಡುವೆ ದೇವಾಲಯ ಇದ್ದು ಶ್ರೀ
ದಕ್ಷಹರ ಸೋಮೇಶ್ವರ ಎಂದೇ ಪೂಜೆಗೊಳ್ಳುತ್ತಿದೆ.
ಶ್ರೀ ಅಗಶ್ತ್ಯ ಮಹರ್ಷಿಗಳು ಇಲ್ಲಿ ತಪೋನಿರತರಾಗಿದ್ದು ಇಲ್ಲಿನ ತುಂಗಾನದಿಯ ತಟದ ಪರಿಸರಕ್ಕೆ
ಮನಸೋತು ತಾವು ಪೂಜಿಸುತ್ತಿದ್ದ ಶ್ರೀ ಲಕ್ಷ್ಮೀನರಸಿಂಹದ ಚಿಕ್ಕ ಸಾಲಿಗ್ರಾಮ ಮೂರ್ತಿಗಳನ್ನು ತಮ್ಮ
ಶಿಷ್ಯ ಶ್ರೀ ಗೋವಿಂದ ಯೋಗಿಗಳಿಗೆ ನೀಡಿ ತೆರೆಳಿದರು ಎಂಬ ನಂಬಿಕೆ ಇದೆ. ಈಗಲೂ ಶ್ರೀ ಲಕ್ಷ್ಮೀನರಸಿಂಹ ಮೂರ್ತಿಗಳು
ಪೂಜಿಸಲ್ಪಡುತ್ತಿದೆ. ಇತಿಹಾಸ ಪುಟದಲ್ಲಿ ೧೪ ನೇ ಶತಮಾನದಲ್ಲಿ ವಿಜಯನಗರದ ಹರಿಹರನ ಕಾಲದಲ್ಲಿ
ಇಲ್ಲಿ ಅಗ್ರಹಾರವನ್ನು ನಿರ್ಮಿಸಿ ಹರಿಹರಿಹಪುರದ ಎಂಬ ಹೆಸರು ಇಟ್ಟ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ.
ಈಗ ಇಲ್ಲಿ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿಗಳು ಪೀಠಾದಿಶರಾಗಿದ್ದಾರೆ. ಹಿಂದಿನ ಗುರುಗಳು ತಮ್ಮ ಉತ್ತರಾಧಿಕಾರಿ ನೇಮಿಸಕ ಕಾರಣ
ಶ್ರೀ ಶೃಂಗೇರಿ ಸ್ವಾಮಿಜಿಗಳಿಂದ ಉತ್ತರಾಧಿಕಾರಿಯಾಗಿ ನೇಮಕಗೊಂಡ ಶ್ರೀ ಶ್ರೀ ಸ್ವಯಂಪ್ರಕಾಶ
ಸಚ್ಚಿದಾನಂದ ಸರಸ್ವತಿಗಳು ಮೂಲತಹ ಶೃಂಗೇರಿ ಸಮೀಪದ ಉಳುವೆ ಗ್ರಾಮದವರು. ತಾಂತ್ರಿಕ
ವಿಜ್ನಾನದಲ್ಲಿ ಪದವಿ ಪಡೆದು ಸೇವೆ ಸಲ್ಲಿಸುವಾಗ ರಾಮಕೃಷ್ಣ ಆಶ್ರಮದ ಸಂಪರ್ಕದಲ್ಲಿ ಆದ್ಯಾತ್ಮದ ನೆಲೆಯನ್ನ ಕಂಡುಕೊಂಡು ನಂತರ ಶೃಂಗೇರಿಯಲ್ಲಿ ಹೆಚ್ಚಿನ
ವೇದ ಅಧ್ಯಯನ ಪಡೆದರು. ಪ್ರಸ್ತುತ ಶ್ರೀ ಮಠದ
ಅಭ್ಯುದಯಕ್ಕೆ ಮರೆಯಾಗುತ್ತಿರುವ ಗುರು ಕುಲದ ಪರಿಕಲ್ಪನೆಯನ್ನು ಆಧುನಿಕ ಕಾಲಕ್ಕೆ ಹೊಂದಿಸಿ ಮರಳಿ ತರುವ ಕಾಯಕಕ್ಕೆ
ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗ ಇದ್ದ ಹಳೆಯ ಶ್ರೀ ಮಠಕ್ಕೆ ಹೊಸ ಸ್ಪರ್ಶ ನೀಡುತ್ತಿದ್ದು ಇಡೀ ದೇವಾಲಯವನ್ನು ಶೀಲಾಮಯವಾಗಿ
ಪುನರ್ ನಿರ್ಮಾಣ ಮಾಡುತ್ತಿದ್ದು ವೇದ ಪಾಠಶಾಲೆ
ಮುಂತಾದ ಕಾರ್ಯಕ್ರಮಗಳಿಂದ ಹೊಸ ಸ್ಪರ್ಶ ನೀಡಿದ್ದಾರೆ.
ತಲುಪವ ಬಗ್ಗೆ : ಶಿವಮೊಗ್ಗ
– ಕೊಪ್ಪ ಮಾರ್ಗವಾಗಿ ಶೃಂಗೇರಿ ಮಾರ್ಗದಲ್ಲಿ ಸುಮಾರು ೧೦ ಕಿ ಮೀ ದೂರದಲ್ಲಿದೆ. ಬೆಂಗಳೂರು
- ಶೃಂಗೇರಿ ಮಾರ್ಗವಾಗಿ ಬರುವುದಾದಾದರೆ ಕೊಪ್ಪ – ಶಿವಮೊಗ್ಗ ಮಾರ್ಗದಲ್ಲಿ ಸುಮಾರು ೧೮
ಕಿ ಮೀ ದೂರದಲ್ಲಿದೆ.
ಶ್ರೀನಿವಾಸ ಮೂರ್ತಿ ಎನ್. ಎಸ್.
ಬೆಂಗಳೂರು – ೫೬೦ ೦೧೯
Mobile - 9449553435
Subscribe to:
Posts (Atom)
-
This is one of beautiful small temple with lot of sculpture located just near to Hariharapura which is 18 Kms from Sringeri on Koppa Road. ...
-
Yelandur Temple - Yelandur is an talluk head quarter located around 60 KMs from Mysore. Here we can see different Gowrishwara temp...
-
ಶ್ರೀ ಚಕ್ರ ಪೂಜಿತ ಹರಿಹರಪುರದ “ಶ್ರೀ ಶಾರದ” ಮಠ ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್ ಶ್ರೀ ಶಂಕರಾಚಾರ್ಯರು ನಾಲ್ಕು ದಿಕ್ಕಿನಲ್ಲಿ ಪೀಠ ಸ್ಥಾಪ...