Friday, 24 April 2020

Gunjiganuru Kumbeshwara Temple





ಚಿತ್ರದುರ್ಗ ಜಿಲ್ಲ್ಲೆಯ ದೇವಾಲಯಗಳೆಂದರೆ ನಮ್ಮ ಕಣ್ಣ ಮುಂದೆ ಬರುವುದು ಪಾಳೇಗಾರಗು ಕಟ್ಟಿದ ದೇವಾಲಯಗಳು. ಜಿಲ್ಲೆಯ ಬಹುತೇಕ ಕಾಣ ಬರುವುದು ಇವರ ನಿರ್ಮಿತ ದೇವಾಲಯಗಳೇ. ಇವುಗಳನ್ನು ಹೊಯ್ಶಳ ನಿರ್ಮಿತ ದೇವಾಲಗಳಿದ್ದರೂ ಪಕ್ಕಕ್ಕೆ ಹೊಂದುಕೊಂಡಂತೆ ಇರುವ ದಾವಣಗೆರ ಜಿಲ್ಲಿಯಲ್ಲಿ ಕಾಣ ಬರುವ ಕಲ್ಯಾಣ ಚಾಲುಕ್ಯರ ದೇವಾಲಯಗಳಲ್ಲಿ ವಿರಳ.  ಅವುಗಳಲ್ಲಿ ಅಪುರೂಪದ ದೇವಾಲಯವೆಂದರ ಹೊಳಲ್ಕೆರೆ ತಾಲ್ಲೂಕಿನ ಗುಂಜಿಗನೂರಿನಲ್ಲಿರುವ ಕಲ್ಯಾಣ ಚಾಲುಕ್ಯ ನಿರ್ಮಿತ ಕುಂಭೇಶ್ಬರ ದೇವಾಲಯ.


ದೇವಾಲಯದಲ್ಲಿನ ಶಾಸನ ಹೇಳುವಂತೆ ಈ ದೇವಾಲಯದ ನಿರ್ಮಿತಿ ಸುಮಾರು ೧೨ ನೇ ಶತಮಾನದ ಆರಂಭ.  ಹೊರ ಭಾಗದಲ್ಲಿ ನೋಡಿದರೆ ನವೀಕರಣಗೊಂಡ ಸಾಧಾರಣ ದೇವಾಲಯದಂತೆ ಕಾಣ ಬಂದರೂ ಒಳ ಭಾಗದಲ್ಲಿ ಪ್ರವೇಶ ಮಾಡಿದರೆ ಕಲ್ಯಾಣ ಚಾಲುಕ್ಯರ ವಾಸ್ತು ಶಿಲ್ಪದ ಅಪುರೂಪದ ದರ್ಶನ ಕಾಣ ಸಿಗುತ್ತದೆ.  ನವರಂಗದ ಕಂಭದಲ್ಲಿನ ಕೆಳಭಾಗದಲ್ಲಿ ಮಾಡಿದ ಅಧುನಿಕ ಸೇರ್ಪಡೆ ಹೊರತು ಪಡಿಸಿದರೆ (ಅಕ್ಕಮಹಾದೇವಿ ಮತ್ತು ಲಿಂಗ) ಉಳಿದ ಶಿಲ್ಪಗಳೆಲ್ಲ ಚಾಲುಕ್ಯರ ಕಾಲದವು.  ಈ ದೇವಾಲಯ ಚಾಲುಕ್ಯ ನಿರ್ಮಿತ ತ್ರೈಪುರಷ ದೇವಾಲಯಗಳಲ್ಲಿ ಒಂದು. ಆದರೆ ಇಲ್ಲಿ ಬ್ರಹ್ಮನ ಬದಲಾಗಿ ಸೂರ್ಯನ ಶಿಲ್ಪವಿದೆ.


ಮೂಲತಹ ತ್ರಿಕುಟಾಚಲ ದೇವಾಲಯವಾದ ಈ ದೇವಾಲಯ ಒಂದು ಮುಚ್ಚಿದ ಗರ್ಭಗುಡಿ ಹಾತು ಎರಡು ತೆರೆದ ಗರ್ಭಗುಡಿ ಹೊಂದಿದೆ. ಮುಖ್ಯ ಗರ್ಭಗುಡಿಯಲ್ಲಿ ಶಿವಲಿಂಗ (ಕುಂಭೇಶ್ವರ) ಇದ್ದು ಚೌಕಾಕಾರದ ಪಾಣಿ ಪೀಠ, ರುದ್ರಭಾಗ ಹೊಂದಿದೆ.  ಎದುರು ಭಾಗದಲ್ಲಿ ನಂದಿ ಇದೆ.  ದಕ್ಷಿಣಾಭಿಮುಖವಾಗಿ ಇರುವ ಗರ್ಭಗುಡಿಯಲ್ಲಿ ವಿಷ್ಣುವಿನ (ಸ್ಥಳಿಯವಾಗಿ ರಂಗನಾಥ ಎಂದು ಕರೆಯುವ) ಮೂರ್ತಿ ಇದೆ. ಸುಮಾರು ೫ ಅಡಿ ಎತ್ತರದ ಮೂರ್ತಿ ಆಭಯ, ಶಂಖ, ಚಕ್ರ ಮತ್ತು ಗಧೆ ಹಿಡಿದಿದ್ದು ಪೀಠದಲ್ಲಿ ಗರುಡನ ಕೆತ್ತೆನೆ ಇದೆ. ಪ್ರಭಾವಳಿಯಲ್ಲಿ ದಶಾವಾತರದ ಕೆತ್ತೆನೆ ಇದ್ದ್ದು ಬದಿಯಲ್ಲಿ ಶ್ರೀ ದೇವಿ ಮತ್ತು ಭೂ ದೇವಿಯ ಕೆತ್ತೆನೆ ಇದೆ. ಪಶ್ಚಿಮಕ್ಕಿರುವ ಗರ್ಭಗುಡಿಯಲ್ಲಿ ಸೂರ್ಯನ ಶಿಲ್ಪವಿದ್ದು ಪೀಟದಲ್ಲಿ ಸಪ್ತಾಶ್ವವಿದ್ದು ಎರಡು ಕೈಗಳಲ್ಲಿ ಕಮಲದ ಮೊಗ್ಗು ಹಿಡಿದಂತೆ ಕೆತ್ತೆನ ಇದೆ. ಪ್ರಭಾವಳಿಯಲ್ಲಿ ದ್ವಾದಶ ಆದಿತ್ಯ ಕೆತ್ತೆನೆ ಇದೆ. ನವರಂಗದಲ್ಲೂ ಮತ್ತೊಂದು ಸೂರ್ಯನ ಶಿಲ್ಪವಿದೆ.

ಗರ್ಬಗುಡಿಯ ಲಲಾಟದಲ್ಲಿ ಗಜಲಕ್ಶ್ಮಿಯ ಕೆತ್ತೆನೆ ಇದ್ದು ಅಂತರಾಳಕ್ಕೆ ಹೊಂದಿಕೊಂಡಂತೆ ನವರಂಗ ಇದೆ. ಇಲ್ಲಿ ಚಾಲುಕ್ಯರ ಕಾಲದ ನಾಲ್ಕು ಕಂಬಗಳಿವೆ. ಇಲ್ಲಿ ಚೌಕ ಬಾಗದಲ್ಲಿನ ಅಕ್ಕಮಹಾದೇವಿ ಮತ್ತು ಶಿವಲಿಂಗದ ಆದುನಿಕ ಕೆತ್ತೆನೆ ಹೊರತು ಪಡಿಸಿದರೆ ಉಳಿದಂತೆ ವೃತ್ತಾಕಾರ ಮತ್ತು ಸರಳ ಬೋದಿಗೆ ಹೊಂದಿದೆ.  ವಿತಾನದಲ್ಲಿ ಪದ್ಮದ ಸರಳ ಕೆತ್ತೆನೆ ಇದೆ. ನವರಂಗದಲ್ಲಿ ಆಸೀನ ಬಂಗಿಯಲ್ಲಿರುವ ಅಪುರೂಪದ ಬೈರವನ ಶಿಲ್ಪ ಇದೆ.  ಕೈನಲ್ಲಿ ಕತ್ತಿ ಮತ್ತು ಕಪಾಲ ಹಿಡಿದಿರುವ ನಗ್ನ ಮೂರ್ತಿ ಸುತ್ತ ಪ್ರಬಾವಳಿ ಇದೆ. ಪಕ್ಕದಲ್ಲಿ ಕತ್ತಿ, ತ್ರಿಶೂಲ, ಡಮರುಗ ಮತ್ತು ಕಪಾಲ ಹಿಡಿದಿರುವ ದುರ್ಗಿಯ ಶಿಲ್ಪ ಹಾಗು ಸರಸ್ವತಿ ಹಾಗು ಗಣಪತಿಯ ಶಿಲ್ಪವಿದೆ. ಮೂಲತಹ ಸಂಪೂರ್ಣ ಮಣ್ಣಿನಲ್ಲಿ ಮುಚ್ಚಿದ್ದ ಈ ದೇವಾಲಯವನ್ನು ಮಣ್ಣು ತೆಗೆದು ನವೀಕರಸಿಲಾಗಿದ್ದು ಇದ್ದ ಶಿತಿಲ ಗೋಪುರ ತೆಗುದು ಹಾಕಲಾಗಿದೆ. ಇಂತಹ ಅಪುರೂಪದ ದೇವಾಲಯ ಯಾರ ಗಮನಕ್ಕೂ ಬಾರದೇ (ಪುರಾತತ್ವ ಇಲಾಖೆಗೂ) ಇರುವುದು ದುರಂತ. 

ದೇವಾಲಯವನ್ನು ತಲುಪಲಿ ಹೊಳಲ್ಕೆರೆ – ದಾವಣಗೆರೆ ಮಾರ್ಗದಲ್ಲಿ ಚಿಕ್ಕಜಾಜೂರಿನ ನಂತರ ಗುಂಜಿಗನೂರು ಎಂದು ಕಾಣುವ ದಾರಿಯಲ್ಲಿ ಬಲಕ್ಕೆ ಸಾಗಿದರೆ ಸಿಗುತ್ತದೆ. ಹೊಳಲ್ಕೆರೆಯಿಂದ ಸುಮಾರು ೧೦  ಕಿ ಮೀ ದೂರದಲ್ಲಿದೆ.

ಶ್ರೀನಿವಾಸ ಮೂರ್ತಿ ಎನ್. ಎಸ್.
೨೪/೨೨೭, ಮೊದಲನೇ ಮಹಡಿ, ಶ್ರೀನಿವಾಸ ನಿಲಯ,
೯ನೇ ಕ್ರಾಸ್, ಎನ್ ಆರ್ ಕಾಲೋನಿ,
ಬೆಂಗಳೂರು – ೫೬೦ ೦೧೯
Mobile - 9449553435




Udri Temples

ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ಅಪುರೂಪದ ದೇವಾಲಯಗಳನ್ನ ತನ್ನ ನೆಲದಲ್ಲಿ ಹೊಂದಿದ್ದರೂ ಅಜ್ನಾತವಾಗಿಯೇ ಉಳಿದಿರುವ ಒಂದು ಅಪುರೂಪದ ಸ್ಥಳವೆಂದರೆ ಸೊರಬದಿಂದ ಸುಮಾರು ೧೫ ಕಿ ಮೀ ದೂರದಲ್ಲಿರುವ ಉದ್ರಿ. ರಾಜ್ಯದಲ್ಲಿಯೇ ಅಪುರೂಪದ ಭುವನೇಶ್ವರಿಯ ಹೊಂದಿರುವ ದೇವಾಲಯ ಇಲ್ಲಿದೆ. ಮೂಲತಹ ಚುಟು ಶಾತವಾಹನರಿಂದರ ಆಳಲ್ಪಟ್ಟ ಪ್ರದೇಶ ನಂತರ ಕದಂಬರು, ಚಾಲುಕ್ಯರು, ಕಲಚೂರ್ಯರು, ಹೊಯ್ಸಳರು ಹಾಗು ವಿಜಯನಗರ ಕಾಲಕ್ಕೆ ಒಳ ಪಟ್ಟಿತ್ತು. ಉದ್ದುರೆ ಉದ್ದಾಪುರ ಎಂದು ಕರೆಯುತ್ತಿದ್ದ ಈ ಊರಿ ಜಿದ್ದುಲಿಗೆ ನಾಡಿನ ಕಾಲದಲ್ಲಿ ಪ್ರಮುಖ ಕೇಂದ್ರವಾಗಿದ್ದು.  ನಂತರ ಹೊಯ್ಸಳ ದೊರೆ ವೀರ ಬಲ್ಲಾಳನ ಕಾಲದಲ್ಲಿ ಬನವಾಸಿಯ ಪ್ರಾದೇಶಿಕ ಕೇಂದ್ರವಾಗಿತ್ತು. ಈಗ ಚಿಕ್ಕ ಗ್ರಾಮವಾಗಿದ್ದು ತನ್ನ ಒಡಲಿನಲ್ಲಿ ಹಲವು ಕಥೆಗಳ ಸಾಕ್ಷಿಯಾಗಿ ನಿಂತಿದೆ.

ಶಿವ ದೇವಾಲಯ :
ಇಲ್ಲಿನ ಪ್ರಮುಖ ದೇವಾಲಯವಾದ ಈ ದೇವಾಲಯ ಮೂಲತಹ ಜೈನ ದೇವಾಲಯ. ಸುಖನಾಸಿಯಲ್ಲಿನ ದ್ವಾರಬಂಧದ ಜೈನ ಶಿಲ್ಪಗಳು ಇಲ್ಲಿನ ಶಾಸನಗಳು ಇದನ್ನ ಸ್ಫುಷ್ಟೀಕರಿಸುತ್ತವೆ. ಈ ದೇವಾಲಯ ಗರ್ಭಗುಡಿ, ಸುಖನಾಸಿ, ಮತ್ತು ನವರಂಗ ಹೊಂದಿದ್ದು, ಗರ್ಭಗುಡಿಯಲ್ಲಿ ಶಿವಲಿಂಗವಿದೆ.  ಸುಖನಾಸಿಯಲ್ಲಿ ನಂದಿ ಇದ್ದು ದ್ವಾರಬಂದದಲ್ಲಿ ಸುಂದರ ಜಾಲಂದ್ರಗಳು ಮತ್ತು ಲಲಾಟದಲ್ಲಿ ಗಜಲಕ್ಷ್ಮೀ ಚಿತ್ರ ಇದೆ.

ಈ ದೇವಾಲಯದ ನವರಂಗದಲ್ಲಿ ಸುಂದರವಾದ ಪದ್ಮ ಹಿಡಿದಿರುವ ಯಕ್ಷೀ, ಗಣೇಶ, ಷಣ್ಮುಖ ಮತ್ತು ಸಪ್ತಮಾತೃಕೆ ಶಿಲ್ಪಗಳಿವೆ. ಈ ದೇವಾಲಯದ ವಿಷೇಶವೆಂದರೆ ಇಲ್ಲಿನ ಭುವನೇಶ್ವರಿಯಲ್ಲಿನ ಕೆತ್ತೆನೆ.  ಐದು ವೄತ್ತಾಕರದ ಎಳೆಗಳ ಸುಂದರ ಕೆತ್ತೆನೆ ಹೊಂದಿರುವ ಇದು ರಾಜ್ಯದ ಭುವನೇಶ್ವರಿಯಲ್ಲಿನ ಕಾಣ ಬರುವ ಅಪುರೂಪದ ಅಧ್ಬುತ ಕೆತ್ತೆನೆ. ಈ ದೇವಾಲಯದ ಆವರಣದಲ್ಲಿನ ಹಲವು ಶಾಸನಗಳು ಇದ್ದು ಅಪುರೂಪದ ಮಹಾಸತಿ ಕಲ್ಲುಗಳು ಇವೆ.  ಸುಮಾರು ೫ ರಿಂದ ೭ ಅಡಿ ಎತ್ತರದ ಈ ಮಹಸತಿಯ ಕಲ್ಲುಗಳು ವಿಷೇಶವಾಗಿದೆ.

ಶ್ರೀ ಲಕ್ಷ್ಮೀ ನಾರಾಯಣ ದೇವಾಲಯ :
ಊರಿನ ಮಧ್ಯ ಭಾಗದಲ್ಲಿರುವ ಈ ದೇವಾಲಯ ಗರ್ಭಗುಡಿ ಮತ್ತು ಸುಖನಾಸಿ ಮಾತ್ರ ಹೊಂದಿದ್ದು ಉಳಿದ ಭಾಗ ನಾಶವಾಗಿದೆ.  ಗರ್ಭಗುಡಿಯಲ್ಲಿ ಪದ್ಮಪೀಠದ ಮೇಲೆ ಸುಮಾರು ೩ ೧/೨ ಅಡಿ ಎತ್ತರದ ಅಸೀನ ಭಂಗಿಯಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣನ ಶಿಲ್ಪವಿದೆ.  ಶಿಲ್ಪದ ಸುತ್ತಲೂ ಸುಂದರವಾದ ಮಕರ ತೋರಣದ ಪ್ರಭಾವಳಿ ಇದೆ.  ಪ್ರಭಾವಳಿಯಲ್ಲಿ ದಶಾವತಾರದ ಕೆತ್ತೆನೆ ಇದೆ. ನಾರಾಯಣನ ಶಿಲ್ಪದಲ್ಲಿ ಸುಂದರ ಕಿರಿಟ ಇದ್ದು ಕೊರಳಿನಲ್ಲಿ ಕಂಠೀಹಾರ, ಯಜ್ನೋಪವೀತ ಇದೆ.  ಬಲಗೈನಲ್ಲಿ ಶಂಖ ಇದ್ದು ಎಡಗೈ ಲಕ್ಷ್ಮೀಯನ್ನು ಬಳಸಿರುವಂತೆ ಇದ್ದು ಲಕ್ಷ್ಮೀಯ ಮುಖ ನಾರಾಯಣನನ್ನು ನೋಡುತ್ತಿರುವಂತೆ ಇದೆ. ಉಳಿದ ಕೈನಲ್ಲಿ ಗದೆ ಮತ್ತು ಚಕ್ರ ಇದೆ.  ದೇವಿಯ ಶಿಲ್ಪದ ಮೇಲೆ ಚಿಕ್ಕ ಆಭರಣವಿದ್ದು ಕಂಠದಲ್ಲಿ ಪದಕದ ಹಾರವಿದೆ. ಶಿಲ್ಪದ ಪೀಠದಲ್ಲಿ ಗರುಡನ ಕೆತ್ತೆನೆ ಇದೆ.  ದೇವಿಯ ಕಾಲಿನ ಪಾದುಕೆ ಗೆಜ್ಜೆಗಳು ಹಾಗು ಪಕ್ಕದಲ್ಲಿ ಭಕ್ತನ ಕೆತ್ತೆನೆ ಇದೆ.

ಶಿವ ದೇವಾಲಯ :
 ಇಲ್ಲಿಂದ ಅನತಿ ದೂರದಲ್ಲಿ ವಿನಾಶದ ಅಂಚಿನಲ್ಲಿರುವ ಒಂದು ಶಿವ ದೇವಾಲಯ ಇದೆ.  ಗರ್ಭಗುಡಿಯಲ್ಲಿ ಶಿವಲಿಂಗ ಇದ್ದು ಸುಖನಾಸಿಯಲ್ಲಿ ದ್ವಾರ ಮಾತ್ರ ಇದ್ದು ಸುಂದರವಾದ ಬಾಗಿಲುವಾಡ ಇದೆ. ಇಲ್ಲಿನ ಹೊರ ಭಾಗದಲ್ಲಿ ಭಾಗಶಃ ಹಾಳಾಗಿರುವ ಸುಂದರ ಮಹಿಷಾಸುರ ಮರ್ಧಿನಿಯ ಮೂರ್ತಿ ಇದೆ.

ತಲುಪವ ಬಗ್ಗೆ : ಸೊರಬದಿಂದ ಸುಮಾರು ೧೫ ಕಿ ಮೀ ದೂರದಲ್ಲಿದೆ.  ಶಿವಮೊಗ್ಗ – ಷಿಕಾರಿಪುರ – ಶಿರಾಳಕೊಪ್ಪ – ತೊಗರ್ಸಿ – ಉದ್ರಿ ತಲುಪಬಹುದು. ಆನವಟ್ಟಿಯ ಮೂಲಕ ಬರುವವರು ಕುಪ್ಪಗುದ್ದೆಯ ಮೂಲಕ ಉದ್ರಿ ತಲುಪಬಹುದು.

ಸಮೀಪದ ಕುಪ್ಪಗದ್ದೆಯ ದೇವಾಲಯಗಳ ಸಂಕೀರ್ಣ, ತೊಗರ್ಸಿಯ ಮಲ್ಲಿಕಾರ್ಜುನ ದೇವಾಲಯ ಆನಬಟ್ಟಿಯ ಕೋಟಿಪುರದ ಕೈಟಭೇಶ್ವರ ದೇವಾಲಯಗಳನ್ನು ನೋಡಬಹುದು.


ಶ್ರೀನಿವಾಸ ಮೂರ್ತಿ ಎನ್. ಎಸ್.
೨೪/೨೨೭, ಮೊದಲನೇ ಮಹಡಿ, ಶ್ರೀನಿವಾಸ ನಿಲಯ,
೯ನೇ ಕ್ರಾಸ್, ಎನ್ ಆರ್ ಕಾಲೋನಿ,
ಬೆಂಗಳೂರು – ೫೬೦ ೦೧೯
Mobile - 9449553435


Malenahalli Ranganatha Temple

¯ÉÃRPÀgÀÄ :²æÃ¤ªÁ¸À ªÀÄÆwðJ£ï.J¸ï.

ಕರ್ನಾಟಕ ಇತಿಹಾಸದಲ್ಲಿ ಹಲವು ಶೈಲಿಯ ದೇವಾಲಯಗಳು ನಿರ್ಮಾಣಗೊಂಡಿವೆ. ಆದರೆ ತಮ್ಮ ಸಿಮೀತ ಮಿತಿಯಲ್ಲಿ ಸ್ಥಳೀಯ ಮಾಂಡಲೀಕರು ಮತ್ತು ಪಾಳೇಗಾರರು ತಮ್ಮದೇ ಆದ ಶೈಲಿಯಲ್ಲಿ ದೇವಾಲಯಗಳನ್ನು ನಿರ್ಮಿಸಿದ್ದಾರೆ.  ಅವುಗಳಲ್ಲಿ ಚಿತ್ರದುರ್ಗ ಜಿಲ್ಲಿಯ ಮಾಳೇನಹಳ್ಳಿಯ ಶ್ರೀ ರಂಗನಾಥ ದೇವಾಲಯವು ಒಂದು.

ಕ್ರಿ ಶ ೧೫೮೦ ರಲ್ಲಿ ಪಾಳೇಗಾರ ತಿಮ್ಮಣ್ಣ ನಾಯಕರ ಮಾರ್ಗದರ್ಶಕರಾಗಿದ್ದ ಶ್ರೀ ವೆಂಕಪ್ಪಯ್ಯನವರಿಂದ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಸುಕನಾಸಿ, ತೆರೆದ ಮಂಟಪ (ನವರಂಗ) ಮತ್ತು ಪ್ರತ್ಯೇಕ ಪ್ರವೇಶ ಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ ಸುಂದರ  ನಾಲ್ಕು ಅಡಿ ಎತ್ತರದ ಶ್ರೀ ರಂಗನಾಥನ ಮೂರ್ತಿ ಇದೆ.  ಸುಂದರ ಪ್ರಭಾವಳಿ ಹೊಂದಿದ್ದು ಕೈನಲ್ಲಿನ ಶಂಖ, ಚಕ್ರ ಮತ್ತು ಗಧೆಯ ಕೆತ್ತೆನೆ ಸುಂದರವಾಗಿದೆ.

ತೆರೆದ ಮಂಟಪದಲ್ಲಿ ಆರು ಕಂಭಗಳಿದ್ದು ಅದರಲ್ಲಿನ ಉಬ್ಬು ಶಿಲ್ಪಗಳ ಕೆತ್ತೆನೆ ಸುಂದರವಾಗಿದೆ. ಆಂಜನೇಯ, ನವನೀತ ಕೄಷ್ಣ, ನರಸಿಂಹ, ವೇಣುಗೋಪಾಲ ಮುಂತಾದ ಸುಂದರ ಉಬ್ಬು ಶಿಲ್ಪಗಳಿವೆ. ಈ ದೇವಾಲಯದ ವೈಶಿಷ್ಟ ಇರುವುದು ಪ್ರವೇಶ ಮಂಟಪದಲ್ಲಿ.  ಇಲ್ಲಿಯೂ ಸುಂದರ ಉಬ್ಬು ಶಿಲ್ಪಗಳ ಕೆತ್ತೆನೆಯ ೪ ಕಂಭಗಳಿದ್ದು ಇದನ್ನೇ ರಾಜಗೋಪುರವಾಗಿ ಪರಿವರ್ತಿಸಲಾಗಿದೆ. ಕಂಭಗಳಲ್ಲಿ ಮೊಸರಿನಿಂದ ಬೆಣ್ಣೆ ಕಡೆಯುವ,  ಶಿವಲಿಂಗಕ್ಕೆ ನಂದಿ ಹಾಲು ಎರೆಯುವ ಶಿಲ್ಪಗಳ ಉಬ್ಬು ಕೆತ್ತೆನೆ ನೋಡಲೇ ಬೇಕಾದದ್ದು. ಎರಡನೆ ಹಂತದಲ್ಲಿ ೧೨ ಕಂಭಗಳ ಮಂಟಪ ಇದ್ದರೆ ಮೂರನೇ  ಮತ್ತು ನಾಲ್ಕನೇ ಮಹಡಿಯಲ್ಲಿ ಚಿಕ್ಕ ಮಂಟಪವಿದೆ. ಇದರ ಮೇಲೆ ಕಳಸವನ್ನು ಸ್ಥಾಪಿಸಲಾಗಿದೆ. ಈ ದೇವಾಲಯಕ್ಕೆ ಗರ್ಭಗುಡಿಯ ಮೇಲೆ ನಾಗರ ಶೈಲಿಯ ಚಿಕ್ಕ ಶಿಖರವಿದೆ.

ದೇವಾಲಯದ ಆವರಣದಲ್ಲಿ ಲಕ್ಷ್ಮೀ, ಆಂಜನೇಯ ಮತ್ತು ಶಿವ ಚಿದಂಬರರ ಚಿಕ್ಕ ಗುಡಿಗಳಿವೆ.  ಶ್ರೀ ಶಂಕರಲಿಂಗರರು ಇಲ್ಲಿಗೆ ಬಂದು ನೆಲೆಸಿದಾಗ ಈ ದೇವಾಲಯಗಳನ್ನು  ೧೯೪೨ ರಲ್ಲಿ ಊರಿನ ಸಹಕಾರದಿಂದ ಜೀರ್ಣೋದ್ದಾರ ಮಾಡಿದರು. ಲಕ್ಷ್ಮೀದೇವಿಯ ವಿಗ್ರಹವನ್ನು ಈ ಸಮಯದಲ್ಲಿಯೇ ಭಿನ್ನವಾದ ವಿಗ್ರಹದ ಬದಲಾಗಿ ಸ್ಥಾಪಿಸಲಾಯಿತು. ಇಲ್ಲಿನ ಆವರಣದಲ್ಲಿ ಗುರುಗಳ ಯೋಗಮಂದಿರವಿದ್ದು ಭಕ್ತರು ಇಲ್ಲಿಗೆ ಬರುತ್ತಾರೆ.

ಈಗ ದೇವಾಲಯವನ್ನು ಹಳೆಯ ಸ್ವರೂಪವನ್ನು ಹಾಗೇಯೆ ಉಳಿಸಿ ಸಾಕಷ್ಟು ನವೀಕರಿಸಲಾಗಿದ್ದು ಆಧುನಿಕ ಸ್ಪರ್ಶ ಪಡೆದಿದೆ. ನಿತ್ಯ ಪೂಜೆ ಇರುವ ಇಲ್ಲಿ ಭಕ್ತರು ನಿತ್ಯ ಬೇಟಿ ನೀಡುತ್ತಾರೆ.  ಇಲ್ಲಿ ರಥ ಸಪ್ತಮಿಯಂದು ಬ್ರಹ್ಮ ರಥೋತ್ಸವ ನಡೆಯುತ್ತದೆ.  ಈ ಸಮಯದಲ್ಲಿ ಷಷ್ಟಿಯಂದು ಕಲ್ಯಾಣೋತ್ಸವ ಮತ್ತು ಸಪ್ತಮಿಯಲ್ಲಿ ಹೋಮ ನಡೆಯುತ್ತದೆ.  ಇಲ್ಲಿ ಭೂತಪ್ಪನಿಗೆ ಎಡೆ ಇಡುವುದು ವಿಷೇಶ.

ತಲುಪವ ಬಗ್ಗೆ : ಮಾಳೇನಹಳ್ಳಿ ಹೊಳಲ್ಕೆರೆ ರೈಲ್ವೆ ನಿಲ್ದಾಣದಿಂದ ೩ ಕಿ ಮೀ ದೂರದಲ್ಲಿದು ಚಿತ್ರದುರ್ಗ – ಹೊಳಲ್ಕೆರೆ ಮಾರ್ಗವಾಗಿ ಅಥವಾ ಶಿವಮೊಗ್ಗ – ಚನ್ನಗಿರಿ ಮಾರ್ಗವಾಗಿಯೂ ತಲುಪಬಹುದು. ಹತ್ತಿರದಲ್ಲಿ ಹೊಳಲ್ಕೆರೆ ರೈಲ್ವೆ ನಿಲ್ದಾಣವಿದೆ. ಹತ್ತಿರದಲ್ಲಿರುವ ಹೊಳಲ್ಕೆರೆಯಲ್ಲಿನ ಜಡೆ ಗಣಪತಿ, ವೇಣುಗೊಫಾಲ ಮತ್ತು ವೀರಭದ್ರ ದೇವಾಲಯ ನೋಡಬಹುದು.

ಶ್ರೀನಿವಾಸ ಮೂರ್ತಿ ಎನ್. ಎಸ್.
೨೪/೨೨೭, ಮೊದಲನೇ ಮಹಡಿ, ಶ್ರೀನಿವಾಸ ನಿಲಯ,
೯ನೇ ಕ್ರಾಸ್, ಎನ್ ಆರ್ ಕಾಲೋನಿ,
ಬೆಂಗಳೂರು – ೫೬೦ ೦೧೯
Mobile - 9449553435


Marehalli Narasimha Temple