Friday, 8 May 2020

Holalu - Hassan District Yoga Naraimha Temple

ಹೊಳಲುವಿನ ಸುಂದರ ಶಿಲ್ಪ ಯೋಗನರಸಿಂಹ
ಲೇಖಕರು : ಶ್ರೀನಿವಾಸ ಮೂರ್ತಿ ಎನ್ ಎಸ್


ಹೊಯ್ಸಳರ ಕಾಲದಲ್ಲು ಹಲವು ನರಸಿಂಹ ದೇವಾಲಯಗಳು ನಿರ್ಮಾಣಗೊಂಡವು.  ನರಸಿಂಹ ಜಯಂತಿಯಲ್ಲಿ ಹಲವು ದೇವಾಲಯಗಳಲ್ಲಿ ಇಂತಹ ದೇವಾಲಯಗಳನ್ನೆಲ್ಲಾ ನೆನಪು ಮಾಡುವಾಗ ಸುಂದರ ಶಿಲ್ಪ ಹೊಂದಿದ್ದರೂ ಅವನತಿಯ ಸಾಗಿರುವ ದೇವಾಲಯದಲ್ಲಿನ ದೇವಾಲಯದ ನೆನಪು ಇಂದಿಗೆ ಸೂಕ್ತ ಅನಿಸುತ್ತದೆ.  ಅಂತಹ ಅಪುರೂಪದ ಶಿಲ್ಪ ಇರುವುದು ಹಾಸನ ಜಿಲ್ಲೆಯಲ್ಲಿನ ಶಾಂತಿಗ್ರಾಮದ ಬಳಿ ದುದ್ದ ಹೋಬಳಿಯಲ್ಲಿ ಇರುವ ಹೊಳಲು ಗ್ರಾಮದಲ್ಲಿ.

ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಅಂತರಾಳ ಹಾಗು ನವರಂಗ ಹೊಂದಿದ್ದು ಮುಂದಿನ ಮುಖಮಂಟಪ ನಂತರ ಕಾಲದ ವಿಸ್ತರಣೆ. ಗರ್ಭಗುಡಿಯಲ್ಲಿ ಎರಡಿ ಎತ್ತರದ ಪಾಣಿ ಪೀಠದ ಮೇಲೆ ಸುಮಾರು ಅರು ಅಡಿ ಎತ್ತರದ ನರಸಿಂಹ ಶಿಲ್ಪವಿದೆ. ಯೋಗ ಆಸೀನ ಭಂಗಿಯಲ್ಲಿನ ಈ ಶಿಲ್ಪ ಎರಡೂ ಕಾಲನ್ನು ಒಂದರ ಒಳಗೆ ಒಂದು ಸೇರಿದಂತೆ ಇರುವುದು ವಿಷೇಶ.  ಮೇಲಿನ ಕೈನಲ್ಲಿ ಶಂಖ ಮತ್ತು ಚಕ್ರ ಇದ್ದು ಕೆಳಗಿನ ಎರಡು ಕೈಗಳು ಕಾಲಿನ ಮೇಲೆ ಇದ್ದು ಯೋಗಾಸಿನ ಭಂಗಿಯಲ್ಲಿ ಇರುವದರಿಂದ ಯೋಗ ನರಸಿಂಹ ಎಂಬ ಹೆಸರು ಇದೆ.  ಶಿಲ್ಪದ ಪ್ರಭಾವಳಿಯಲ್ಲಿ ಸುಂದರ ದಶಾವಾತರದ ಕೆತ್ತೆನೆ ಇದೆ. ಸುಂದರ ಕಿರಿಟದ ಕೆತ್ತೆನೆ ಇದ್ದು ಕೈನಲ್ಲಿನ ಕಲಾತ್ಮಕ ಉಗುರಿನ ಕೆತ್ತೆನೆ ಗಮನ ಸೆಳೆಯುತ್ತದೆ.

ನವರಂಗದಲ್ಲಿ ಹೊಯ್ಸಳ ಶೈಲಿಯ ಕಂಭಗಳಿದ್ದು ವಿತಾನದಲ್ಲಿ ಕಮಲದ ಕೆತ್ತೆನೆ ಇದೆ. ಮುಂದಿನ ಮಂಟಪವನ್ನು ನಂತರದ ಕಾಲದಲ್ಲಿ ದೇವಾಲಯದ ಸಂರಕ್ಷಣೆಗೆ ನಿರ್ಮಿಸಿಲಾಗಿದ್ದು ಈಗ ಅದು ಅವನತಿಯತ್ತ ಸಾಗಿದೆ.  ಕಳೆದ ಹಲವು ದಶಕದಿಂದ ಅನಾಥವಾಗಿದ್ದ ಈ ದೇವಾಲಯಕ್ಕೆ ಹಾಸನ ಜಿಲ್ಲ ಐತಿಹಾಸಿಕ ಸಂರಕ್ಷಣ ವೇದಿಕೆ ಮತ್ತು ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್  ದೀಪ ಹಾಗು ಬಾಗಿಲಿನ ವ್ಯವಸ್ಥೆ ಮಾಡಿದ್ದು ನವೀಕರಣಕ್ಕಾಗಿ ಕಾಯುತ್ತಿದೆ.  ಊರಿನವರು ಮತ್ತು ಸರ್ಕಾರ ಇದನ್ನು ಸಂರಕ್ಷಣೆ ಮಾಡದಿದ್ದಲ್ಲಿ ಅಪುರೂಪದ ಶಿಲ್ಪದ ಈ ದೇವಾಲಯ ಮರೆತ ಪುಟಗಳಲ್ಲಿ ಸೇರೀತು.

ದೇವಾಲಯ ನವೀಕರಣದಲ್ಲಿ ಶ್ರೀ ನಟರಾಜ ಪಂಡಿತರು ಅಪಾರ ಶ್ರಮಿಸಿತ್ತಿದ್ದು, ಎಲ್ಲ ಕಾರ್ಯಗಳಲ್ಲಿ ಟಿ.ವಿ. ನಟರಾಜ ಪಂಡಿತರ ಪತ್ನಿ ಶ್ರೀಮತಿ ಜಯಲಕ್ಷ್ಮೀ ಹಾಗೂ ಮಕ್ಕಳಾದ ಚಿ. ಪವನ್ ಭಾರದ್ವಾಜ್ ಹಾಗೂ ಪುತ್ರಿ ಚಿ. ಭಾರ್ಗವಿ ಪಂಡಿತ್ ಇವರ ಪೂರ್ಣ ಸಹಕಾರವಿದೆ. ಇದಲ್ಲದೆ ಮಿತ್ರರಾದ ಶ್ರೀ ಗಿರೀಶ್ ಭಾರದ್ವಾಜ್ (90360 15520), ಉತ್ತಿಷ್ಠ ಭಾರತದ ಕಾರ್ಯಕರ್ತರಾದ ಶ್ರೀ ನೀರಜ್ ಕಾಮತ್ ( 9964142207), ಶ್ರೀನಿವಾಸ್ (99645 78740)

ತಲುಪವ ಬಗ್ಗೆ : ಮಂಗಳೂರು – ಬೆಂಗಳೂರು ಹೆದ್ದಾರಿಯಲ್ಲಿ ಶಾಂತಿಗ್ರಾಮದ ಬಳಿ ಸುಮಾರು ೩ ಕಿ ಮೀ ದೂರದಲ್ಲಿದೆ.

ಶ್ರೀನಿವಾಸ ಮೂರ್ತಿ ಎನ್. ಎಸ್.
Mobile - 9449553435







Pavagada Shaneeswara Temple